ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಬೌಲರುಗಳಿಗೆ ಸಹನೆ ಅಗತ್ಯ: ದೇವೇಂದ್ರ ಬಿಶೂ

ಶುಕ್ರವಾರ, 22 ಜುಲೈ 2016 (15:11 IST)
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೌಲರುಗಳು ವಿಕೆಟ್ ಕಬಳಿಸುವುದಕ್ಕೆ ಸಹನೆಯಿಂದ ಇರಬೇಕು ಎಂದು ವೆಸ್ಟ್ ಇಂಡೀಸ್ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ ತಿಳಿಸಿದ್ದಾರೆ. ಮೊದಲದಿನದಾಟದಲ್ಲಿ ಪಿಚ್‌ಗಳು ಅಷ್ಟೇನು ಟರ್ನ್ ತೆಗೆದುಕೊಳ್ಳುವುದಿಲ್ಲ. ಮೂರು, ನಾಲ್ಕು ಮತ್ತು ಐದನೇ ದಿನ ಹೆಚ್ಚು ತಿರುವು ತೆಗೆದುಕೊಳ್ಳುತ್ತದೆ ಎಂದು ಬಿಶೂ ಹೇಳಿದರು.
 
ಬಿಶೂ ಮೂರು ವಿಕೆಟ್ ಕಬಳಿಸಿದ್ದರೆ, ಗ್ಯಾಬ್ರಿಯಲ್ ಶ್ರೇಷ್ಟ ಬೌಲಿಂಗ್ ಮಾಡಿದ್ದು ಓಪನರ್‌ಗಳಾದ ಶಿಖರ್ ಧವನ್ ಮತ್ತು ಮುರಳಿ ವಿಜಯ್ ವಿಕೆಟ್ ತೆಗೆದಿದ್ದಾರೆ. ಅವರು ಪ್ರತಿಯೊಂದು ಎಸೆತದಲ್ಲೂ ಅಪಾಯಕಾರಿಯಾಗಿ ಕಂಡಿದ್ದರು.
 
 ವೆಸ್ಟ್ ಇಂಡೀಸ್ ಕೇವಲ ನಾಲ್ಕು ಬೌಲರುಗಳನ್ನು ಆಯ್ಕೆ ಮಾಡುವ ಮೂಲಕ ತಪ್ಪೆಸಗಿದೆಯೇ ಎಂಬ ಪ್ರಶ್ನೆಗೆ, ಇಲ್ಲವೆಂದು ಉತ್ತರಿಸಿದರು.
 
 ಕೊಹ್ಲಿಯ ಶತಕ ಕುರಿತು ಬಿಶೂ ಹೆಚ್ಚು ಮಾತನಾಡಲಿಲ್ಲ. ಅವರಿಗೆ ಬೌಲ್ ಮಾಡುವುದು ಸವಾಲೇನೂ ಅಲ್ಲ.  ಅಂತಿಮವಾಗಿ ಇದು ಇದು ಕ್ರಿಕೆಟ್ ಆಗಿರುವುದರಿಂದ ನಾವು ಸಹನೆಯಿಂದ ಇರಬೇಕು. ಪ್ರತಿಯೊಬ್ಬರಿಗೂ ಒಳ್ಳೆಯ ಮತ್ತು ಕೆಟ್ಟ ದಿನಗಳು ಇರುತ್ತದೆ. ನಾವು ತಂಡವಾಗಿ ಮುಂದಕ್ಕೆ ಸಾಗಬೇಕು ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ