ಅಂಪೈರ್‌ನನ್ನು ನಿಂದಿಸಿದ ಕ್ರಿಕೆಟರ್ ಫಬ್ಲರ್‌ಗೆ ಏಳು ವರ್ಷಗಳ ನಿಷೇಧ

ಗುರುವಾರ, 9 ಜೂನ್ 2016 (13:55 IST)
ಪ್ರೀಮಿಯರ್ ಡಿವಿಷನ್ ಪಂದ್ಯವೊಂದರಲ್ಲಿ ಎಲ್‌ಬಿಡಬ್ಲ್ಯು ಔಟಾದ ಬಳಿಕ ಸ್ಟಂಪ್‌ಗಳನ್ನು ಒಡೆದುಹಾಕಿ ಅಂಪೈರ್‌ಗೆ ನಿಂದಿಸಿದ ಆಲ್‌ರೌಂಡರ್ ಕಾವನ್ ಫಬ್ಲರ್ ಅವರನ್ನು ಬರ್ಮುಡಾ ಕ್ರಿಕೆಟ್ ಮಂಡಲಿಯು ಕ್ರಿಕೆಟ್‌‍ನಿಂದ ಏಳುವರ್ಷಗಳ ಕಾಲ ನಿಷೇಧಿಸಿದೆ. ಫಬ್ಲರ್ ಮಂಗಳವಾರ ಶಿಸ್ತು ಸಮಿತಿಯ ಎದುರು ಹಾಜರಾದಾಗ ಲೆವೆಲ್ 4 ಅಪರಾಧಗಳಿಗಾಗಿ ಈ ಶಿಕ್ಷೆ ವಿಧಿಸಲಾಯಿತು.
 
ವಿಲ್ಲೊ ಕಟ್ಸ್ ಪರ ಸೀ ಬ್ರೀಜ್ ಓವಲ್‌ನಲ್ಲಿ ಬೈಲಿ ಬೇ ವಿರುದ್ಧ ಆಡುತ್ತಿದ್ದ ಫಬ್ಲರ್ ತಮ್ಮ ದುರ್ವರ್ತನೆ ಬಳಿಕವೂ ಆಟದಲ್ಲಿ ಮುಂದುವರಿದು 6. 3 ಓವರುಗಳನ್ನು ಬೌಲ್ ಮಾಡಿದ ಬಳಿಕ ಬೈಲಿ ಬೇ ಏಳು ವಿಕೆಟ್‌ಗಳಿಂದ ಗೆಲುವು ಗಳಿಸಿತ್ತು.  ಅಂಪೈರ್ ಕಾಲ್ ವಾಲ್ಡ್ರನ್ ಕಡೆ ಚೆಂಡನ್ನು ಫಬ್ಲರ್ ಎಸೆದಿರದಿದ್ದರೆ ಮತ್ತು ತಮ್ಮನ್ನು ಔಟ್ ಮಾಡಿದರೆ ಸ್ಟಂಪ್‌ಗಳನ್ನು ಮುರಿದುಹಾಕುವುದಾಗಿ ಹೆದರಿಸಿದ್ದು  ಅಂಪೈರ್‌ಗೆ ಕೇಳಿಸಿರದಿದ್ದರೆ ಫಬ್ಲರ್ ಇನ್ನೂ ಕಡಿಮೆ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯಿತ್ತು. 
 
2011ರಲ್ಲಿ ಫಬ್ಲರ್ ಅವರನ್ನು ಸಾಮರ್ಸೆಟ್ ಕ್ರಿಕೆಟ್ ಕ್ಲಬ್‌ನಿಂದ ನಿಷೇಧಿಸಲಾಗಿತ್ತು.  ಸಾಮರ್‌ಸೆಟ್ ಮತ್ತು ಸೇಂಟ್ ಜಾರ್ಜ್ ಪಂದ್ಯದಲ್ಲಿ ಫಬ್ಲರ್ ಅವರನ್ನು ತಂಡದಿಂದ ಹೊರಗಿಟ್ಟಿದ್ದರಿಂದ ಅವರು ಆಯ್ಕೆದಾರ ಮೋಲಿ ಸೈಮನ್ಸ್ ಅವರನ್ನು ಕೆಟ್ಟ ಮಾತುಗಳಿಂದ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಫಬ್ಲರ್‌ಗೆ ನಿಷೇಧ ವಿಧಿಸಲಾಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ