ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ರನ್ ಯಂತ್ರವಾಗಿದ್ದು, ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ, ಏಷ್ಯಾ ಕಪ್ 2016ನಿಂದ ಐಸಿಸಿ ವಿಶ್ವ ಟ್ವೆಂಟಿ20ವರೆಗೆ ದೆಹಲಿ ಬ್ಯಾಟ್ಸ್‌ಮನ್ ಉತ್ತಮ ಫಾರಂನಲ್ಲಿದ್ದು, ಅಸಂಖ್ಯಾತ ದಾಖಲೆಗಳನ್ನು ಮುರಿದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೂಡ, ಕೊಹ್ಲಿ ಏಕಾಂಗಿಯಾಗಿ ರಾಯಲ್ ಚಾಲೆಂಜರ್ಸ್ ತಂಡವನ್ನು ಫೈನಲ್‌ಗೆ ಮುಟ್ಟಿಸಿದ್ದರು.
ಕೊಹ್ಲಿ ಹೊಸ ಕೋಚ್ ಅನಿಲ್ ಕುಂಬ್ಳೆ ಸಹಯೋಗದಲ್ಲಿ ವಿದೇಶಿ ಪಂದ್ಯಗಳಲ್ಲಿ ಸೋಲಿನ ಸಂಕಷ್ಟಕ್ಕೆ ತೆರೆಎಳೆಯುವರೇ ಕಾದು ನೋಡಬೇಕು. ತಂಡದ ಸಂಯೋಜನೆಯನ್ನು ಸರಿಯಾಗಿ ಇರಿಸಲು ವಿಂಡೀಸ್ ತಿಣುಕಾಡುತ್ತಿರುವ ನಡುವೆ, ಭಾರತದ ಫಾರಂ ಕಂಡುಕೊಂಡಿರುವ ಅನೇಕ ಬ್ಯಾಟ್ಸ್‌ಮನ್‌ಗಳು ವೆಸ್ಟ್ ಇಂಡೀಸ್ ಬೌಲರುಗಳಿಗೆ ಸಂಕಷ್ಟ ತರಬಲ್ಲರು.