2016 ವಿರಾಟ್ ಕೊಹ್ಲಿ ವರ್ಷ ಎಂದೇ ಕ್ರಿಕೆಟ್ ಇತಿಹಾಸದಲ್ಲಿ ಹೇಳಬಹುದು. ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯಗಳಿಂದ ಹಿಡಿದು ವೆಸ್ಟ್ ಇಂಡೀಸ್ನ ಈಗಿನ ಟೆಸ್ಟ್ ಸರಣಿವರೆಗೆ ಯಾವುದೇ ಬೌಲರ್ಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಭಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ವೇಗ ಅಥವಾ ಸ್ಪಿನ್ ಎಲ್ಲವುದಕ್ಕೂ ವಿರಾಟ್ ಬಳಿ ಸಿದ್ಧ ಉತ್ತರವಿರುತ್ತದೆ. ಕೊಹ್ಲಿ ಜಾಸನ್ ಹೋಲ್ಡರ್ ತಂಡದ ವಿರುದ್ಧ ಮೊದಲ ಟೆಸ್ಟ್ನಲ್ಲಿ ಮೊದಲ ದ್ವಿಶತಕ ದಾಖಲಿಸಿ ತಮ್ಮ ಆಟವನ್ನು ಇನ್ನೊಂದು ಮಟ್ಟಕ್ಕೆ ಒಯ್ದರು.