ಅಂದು ಕೊಹ್ಲಿಗೆ ಧೋನಿ ಮಾಡಿದ್ದನ್ನೇ ಇಂದು ಕೆಎಲ್ ರಾಹುಲ್ ಗೆ ಕೊಹ್ಲಿ ಮಾಡಲಿಲ್ಲ!

ಶುಕ್ರವಾರ, 13 ಜುಲೈ 2018 (09:23 IST)
ಟ್ರೆಂಟ್ ಬ್ರಿಡ್ಜ್: ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿತ್ತು. ಸಿಡಿಯುತ್ತಿದ್ದ ಕೊಹ್ಲಿಯನ್ನು ಯಾವ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಬೇಕೆಂದು ಚರ್ಚೆಯಾಗುತ್ತಿತ್ತು.

ಈ ಸಂದರ್ಭದಲ್ಲಿ ಧೋನಿ ತಮ್ಮ ನೆಚ್ಚಿನ ಮೂರನೇ ಕ್ರಮಾಂಕವನ್ನೇ ಕೊಹ್ಲಿಗೆ ಬಿಟ್ಟುಕೊಟ್ಟರು. ಆ ಮೂಲಕ ಕೊಹ್ಲಿ ಮೂರನೇ ಕ್ರಮಾಂಕದ ಖಾಯಂ ಬ್ಯಾಟ್ಸ್ ಮನ್ ಆದರು. ಅಷ್ಟೇ ಅಲ್ಲ, ಕೊಹ್ಲಿ ಹಲವು ದಾಖಲೆ ಮಾಡಿದ್ದೂ ಇದೇ ಕ್ರಮಾಂಕದಲ್ಲಿ.

ಅದೇ ಪರಿಸ್ಥಿತಿ ಇದೀಗ ಕೊಹ್ಲಿಗೂ ಎದುರಾಗಿದೆ. ಕೆಎಲ್ ರಾಹುಲ್ ಎಂಬ ಪ್ರತಿಭಾವಂತ ಮೂರನೇ ಕ್ರಮಾಂಕದಲ್ಲಿ ಮಿಂಚಿದ್ದೇ ತಡ. ಇದೀಗ ಕೊಹ್ಲಿ ತಮ್ಮ ನೆಚ್ಚಿನ ಸ್ಥಾನವನ್ನು ರಾಹುಲ್ ಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಿದೆ. ವಿಶೇಷವೆಂದರೆ ಧೋನಿಗೂ ಮೊದಲು ನಾಯಕರಾಗಿದ್ದ ಗಂಗೂಲಿ ಕೂಡಾ ಕೆಲವು ಸಮಯ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು! ಹಾಗಾಗಿ ಮೂರನೇ ಕ್ರಮಾಂಕಕ್ಕೂ ಟೀಂ ಇಂಡಿಯಾ ನಾಯಕತ್ವಕ್ಕೂ ಅವಿನಾಭಾವ ಸಂಬಂಧವಿದೆ. 

ಆದರೆ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಮೆಚ್ಚಿನ ಮೂರನೇ ಕ್ರಮಾಂಕವನ್ನು ರಾಹುಲ್ ಗೆ ಬಿಟ್ಟುಕೊಡಲಿಲ್ಲ. ಧವನ್ ವಿಕೆಟ್ ಕಳೆದುಕೊಂಡಿದ್ದಾಗ ತಾವೇ ಮೂರನೇ ಕ್ರಮಾಂಕದಲ್ಲಿ ಇಳಿದು ಅರ್ಧಶತಕ ಗಳಿಸಿದರು. ಆದರೆ ಅವರು ಔಟಾದಾಗ ನಾಲ್ಕನೆಯ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಗೆ ಇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ