ಕ್ರಿಕೆಟ್ ನಲ್ಲಿ ಟೈಮ್ಡ್ ಔಟ್ ಎಂದರೇನು?
ಅವರು ಈ ರೀತಿ ಔಟಾಗಿದ್ದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಶಕೀಬ್ ಅಲ್ ಹಸನ್ ಕನಿಷ್ಠ ಕ್ರೀಡಾಸ್ಪೂರ್ತಿಯಿಂದ ಮ್ಯಾಥ್ಯೂಸ್ ಗೆ ಅವಕಾಶ ನೀಡಬಹುದಿತ್ತು ಎಂಬಿತ್ಯಾದಿ ಚರ್ಚೆಗಳಾಗುತ್ತಿವೆ. ಅಷ್ಟಕ್ಕೂ ಟೈಮ್ಡ್ ಔಟ್ ಎಂದರೇನು?
ಒಬ್ಬ ಬ್ಯಾಟಿಗ ಔಟಾದ ಬಳಿಕ ಕ್ರೀಸ್ ಗೆ ಬರುವ ಬ್ಯಾಟಿಗ ಮೂರು ನಿಮಿಷಗಳೊಳಗೆ ಕ್ರೀಸ್ ನಲ್ಲಿದ್ದು ಬ್ಯಾಟಿಂಗ್ ಗೆ ಸಿದ್ಧವಾಗಬೇಕು. ಅದರಲ್ಲೂ ವಿಶ್ವಕಪ್ ನಲ್ಲಿ ಕೇವಲ 2 ನಿಮಿಷವಷ್ಟೇ ಕಾಲಾವಕಾಶವಿದೆ. ಇದು ನಿಯಮ. ಒಂದು ವೇಳೆ ಈ ನಿಯಮ ಮೀರಿ ಬ್ಯಾಟಿಗ ಸಮಯ ತೆಗೆದುಕೊಂಡಲ್ಲಿ ಎದುರಾಳಿ ತಂಡದವರು ಆ ಬ್ಯಾಟಿಗನ ಔಟ್ ಗೆ ಮನವಿ ಸಲ್ಲಿಸಬಹುದು. ಕೆಲವರು ಕ್ರೀಡಾ ಮನೋಭಾವನೆಯಿಂದ ಹಾಗೆಯೇ ಬಿಟ್ಟುಬಿಡಬಹುದು. ಆದರೆ ನಿನ್ನೆಯ ಪಂದ್ಯದಲ್ಲಿ ಶಕೀಬ್ ನಿಯಮದ ಪ್ರಕಾರವೇ ಔಟ್ ಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಮ್ಯಾಥ್ಯೂಸ್ ಗೆ ಔಟ್ ನೀಡಿದ್ದು ನಿಯಮದ ಪ್ರಕಾರ ತಪ್ಪಲ್ಲ. ಇದು ಒಂದು ರೀತಿಯಲ್ಲಿ ಮಂಕಡ್ ಔಟ್ ನಂತೆ. ನಿಯಮದ ಪ್ರಕಾರ ಸರಿಯಿದ್ದರೂ ಕ್ರೀಡಾಮನೋಭಾವನೆ ದೃಷ್ಟಿಯಿಂದ ಇಂತಹ ಮನವಿಗಳು ಟೀಕೆಗೊಳಗಾಗುತ್ತವೆ.