ರೋಹಿತ್ ಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಕೊಟ್ಟು ಕಾರಣವನ್ನೂ ವಿವರಿಸಿದ ಕೋಚ್

ಸೋಮವಾರ, 6 ನವೆಂಬರ್ 2023 (10:10 IST)
Photo Courtesy: Twitter
ಕೋಲ್ಕೊತ್ತಾ: ದ.ಆಫ್ರಿಕಾ ವಿರುದ್ದದ ಏಕದಿನ  ವಿಶ್ವಕಪ್ ಪಂದ್ಯವನ್ನು ಗೆದ್ದ ಬಳಿಕ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬೆಸ್ಟ್ ಫೀಲ್ಡರ್ ಯಾರು ಎಂದು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಘೋಷಣೆ ಮಾಡಿದ್ದಾರೆ.
 

ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇಂತಹದ್ದೊಂದು ಸಂಪ್ರದಾಯ ಆರಂಭಿಸಿದೆ. ಆಯಾ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಕ್ರಿಯೇಟಿವ್ ಆಗಿ ಬೆಸ್ಟ್ ಫೀಲ್ಡರ್ ಪದಕ ನೀಡಲಾಗುತ್ತಿದೆ.

 ಈ ಬಾರಿ ಬೆಸ್ಟ್ ಫೀಲ್ಡರ್ ಅವಾರ್ಡ್ ಸ್ವತಃ ನಾಯಕ ರೋಹಿತ್ ಶರ್ಮಾಗೆ ಲಭಿಸಿದೆ. ಬಳಿಕ ಮಾತನಾಡಿರುವ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಈ ಅವಾರ್ಡ್ ಕೇವಲ ಒಂದು ಕ್ಯಾಚ್ ನೋಡಿ ಕೊಡುವುದಲ್ಲ. ಇಡೀ ಪಂದ್ಯದಲ್ಲಿ ಫೀಲ್ಡಿಂಗ್ ಸರ್ವಾಂಗೀಣ ಪ್ರದರ್ಶನ ಗಮನಿಸಿ ನೀಡಲಾಗುತ್ತದೆ. ಈ ಪದಕ ಎಲ್ಲಾ 15 ಸದಸ್ಯರಿಗೂ ಗಳಿಸುವ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸುವುದು ಇದರ ಉದ್ದೇಶ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ