ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ, ತಮ್ಮ ಗೆಳತಿ ಅನುಷ್ಕಾ ಶರ್ಮಾರನ್ನು ಬೀಳ್ಕೋಡಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ, ಅನುಷ್ಕಾಗೆ ಕಿಸ್ ಕೊಟ್ಟಿರುವ ಚಿತ್ರಗಳು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಕಾರಿನಲ್ಲಿ ಕುಳಿತು ಕೆಲ ಕಾಲ ಚಾಟ್ ಮಾಡಿದ ವಿರಾಟ್ ಮತ್ತು ಅನುಷ್ಕಾ, ನಂತರ ಆಕೆ ವಿಮಾನ ನಿಲ್ದಾಣದೊಳಗೆ ತೆರಳುವ ಸಂದರ್ಭದಲ್ಲಿ, ವಿರಾಟ್ ಆಕೆಯನ್ನು ಬಿಗಿದಪ್ಪಿ ಕಿಸ್ ಕೊಟ್ಟಿರುವ ದೃಶ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಿಗೆ ಹರಿಬಿಟ್ಟಿದ್ದಾರೆ.