ಲಂಕಾ ವಿರುದ್ಧ ಗೆದ್ದ ಮೇಲೆ ಬಾಂಗ್ಲಾದೇಶ ಡ್ರೆಸ್ಸಿಂಗ್ ರೂಂ ಗಾಜು ಒಡೆದವರು ಯಾರೆಂದು ಬಹಿರಂಗ!

ಬುಧವಾರ, 21 ಮಾರ್ಚ್ 2018 (09:18 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಟಿ20 ಪಂದ್ಯ ಮುಗಿದ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಂ ಗಾಜು ಪುಡಿ ಪುಡಿಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈ ಕೆಲಸ ಮಾಡಿದವರು ಯಾರೆಂದು ತಿಳಿದುಬಂದಿದೆ.

ಅಂತಿಮ ಓವರ್ ನಲ್ಲಿ ನೋ ಬಾಲ್ ನಿರ್ಣಯದ ವಿಚಾರಕ್ಕೆ ಲಂಕಾ ಕ್ರಿಕೆಟಿಗರ ಜತೆ ಕಾದಾಡಿದ್ದ ಬಾಂಗ್ಲಾ ಕ್ರಿಕೆಟಿಗರು, ಡ್ರೆಸ್ಸಿಂಗ್ ರೂಂನಲ್ಲೂ ಪುಂಡಾಟ ಮೆರೆದಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು, ಪ್ರತ್ಯಕ್ಷದರ್ಶಿಗಳನ್ನು ವಿಚಾರಿಸಿದ ಮೇಲೆ ಗಾಜು ಪುಡಿ ಮಾಡಿದ್ದು ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಎಂದು  ತಿಳಿದುಬಂದಿದೆ.

ಈ ಹಿಂದೆಯೂ ಶಕೀಬ್ ಅಶಿಸ್ತಿನ ವರ್ತನೆಯಿಂದ ಕ್ರಿಕೆಟ್ ನಿಂದ ಆರು ತಿಂಗಳು ನಿಷೇಧಕ್ಕೊಳಗಾಗಿದ್ದರು. ಈಗಾಗಲೇ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಗಾಜು ಪುಡಿಯಾಗಿರುವುದರ ದಂಡ ಕಟ್ಟುವುದಾಗಿ ಹೇಳಿದೆ. ಹಾಗಿದ್ದರೂ ಐಸಿಸಿ ಶಿಸ್ತು ಕ್ರಮ ಕೈಗೊಂಡರೆ ಮತ್ತೆ ಶಕೀಬ್ ಗೆ ಶಿಕ್ಷೆಯಾಗುವ ಸಂಭವವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ