ಟೀಂ ಇಂಡಿಯಾ ಮುಂದಿನ ಉಪನಾಯಕ ಯಾರು?
ರೋಹಿತ್ ಶರ್ಮಾ ನಾಯಕರಾದಾಗ ಕೆಎಲ್ ರಾಹುಲ್ ರನ್ನು ತಂಡದ ಉಪನಾಯಕನಾಗಿ ಮಾಡಲಾಗಿತ್ತು. ಆದರೆ ರಾಹುಲ್ ಕಳಪೆ ಫಾರ್ಮ್ ನಿಂದಾಗಿ ಸೀಮಿತ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವ ಪಟ್ಟ ಕಟ್ಟಲಾಯಿತು. ಬಳಿಕ ಟೆಸ್ಟ್ ತಂಡದಲ್ಲಿ ಮಾತ್ರ ಕೆಎಲ್ ರಾಹುಲ್ ಉಪನಾಯಕನಾಗಿ ಮುಂದುವರಿದರು.
ಈಗ ಟೆಸ್ಟ್ ತಂಡದಲ್ಲೂ ಅವರ ಸ್ಥಾನಕ್ಕೇ ಕುತ್ತು ಬಂದಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರ ಉಪನಾಯಕತ್ವಕ್ಕೆ ಕೊಕ್ ನೀಡಲಾಯಿತು. ಈಗ ಆಯ್ಕೆಗಾರರು ಹೊಸ ಉಪನಾಯಕನನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ ರಿಷಬ್ ಪಂತ್ ತಂಡಕ್ಕೆ ವಾಪಸ್ ಆದ ಬಳಿಕ ಅವರನ್ನೇ ಉಪನಾಯಕನಾಗಿ ಘೋಷಿಸಬಹುದು. ಹಾಗಾಗಿ ಅಷ್ಟು ಸಮಯ ತಂಡಕ್ಕೆ ಖಾಯಂ ಉಪನಾಯಕನ ನೇಮಕ ಮಾಡೋದು ಅನುಮಾನ.