ಏಷ್ಯಾ ಕಪ್ ಕ್ರಿಕೆಟ್: ಸೂಪರ್ ಫೋರ್ ನಲ್ಲಿ ಭಾರತದ ಎದುರಾಳಿ ಯಾರು?

ಶುಕ್ರವಾರ, 2 ಸೆಪ್ಟಂಬರ್ 2022 (08:00 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ವಿರುದ್ಧ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸೂಪರ್ ಫೋರ್ ಹಂತಕ್ಕೇರಿದೆ.

ಇದರೊಂದಿಗೆ ಎರಡು ಲೀಗ್ ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಎ ಗುಂಪಿನ ಅಗ್ರ ತಂಡವಾಗಿದೆ. ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನ ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಂಗ್ ಕಾಂಗ್ ಮೂರನೇ ಸ್ಥಾನದಲ್ಲಿದೆ. ಅತ್ತ ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ ಎರಡು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೂಪರ್ ಫೋರ್ ಹಂತಕ್ಕೇರಿದೆ. ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಇಂದು ಹಾಂಗ್ ಕಾಂಗ್ ವಿರುದ್ಧ ಪಂದ್ಯವಿದೆ. ಈ ಪಂದ್ಯವನ್ನು ಪಾಕ್ ಗೆದ್ದ ಎ 2 ಸ್ಥಾನವನ್ನು ಪಾಕಿಸ್ತಾನ ಖಚಿತಪಡಿಸಲಿದೆ. ಒಂದು ವೇಳೆ ಸೋತರೆ ಹಾಂಗ್ ಕಾಂಗ್ ಎ2 ತಂಡವಾಗಲಿದೆ.

ಒಂದು ವೇಳೆ ಇಂದಿನ ಪಂದ್ಯದಲ್ಲಿ ಪಾಕ್ ಗೆದ್ದರೆ ಭಾನುವಾರ ನಡೆಯಲಿರುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗಲಿದೆ. ಒಂದು ವೇಳೆ ಪಾಕ್ ಹಾಂಗ್ ಕಾಂಗ್ ವಿರುದ್ಧ ಸೋತರೆ ಭಾರತ-ಪಾಕಿಸ್ತಾನ ಮತ್ತೆ ಈ ಏಷ್ಯಾ ಕಪ್ ನಲ್ಲಿ ಮುಖಾಮುಖಿಯಾಗುವ ಸಾಧ‍್ಯತೆಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ