ವಿರಾಟ್ ಕೊಹ್ಲಿಗೆ ಟೀಂ ಜೆರ್ಸಿ ಗಿಫ್ಟ್ ಕೊಟ್ಟ ಹಾಂಗ್ ಕಾಂಗ್ ಕ್ರಿಕೆಟಿಗರು

ಗುರುವಾರ, 1 ಸೆಪ್ಟಂಬರ್ 2022 (11:14 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ನಿನ್ನೆ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಬಳಿಕ ಹಾಂಗ್ ಕಾಂಗ್ ಆಟಗಾರರು ವಿರಾಟ್ ಕೊಹ್ಲಿಗೆ ಅಪರೂಪದ ಉಡುಗೊರೆ ಕೊಟ್ಟಿದ್ದಾರೆ.

ಪಂದ್ಯದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಹಾಂಗ್ ಕಾಂಗ್ ಆಟಗಾರರು ತಮ್ಮ ಎಲ್ಲಾ ಆಟಗಾರರು ಸಹಿ ಮಾಡಿದ ಟೀಂ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ವಿರಾಟ್ , ಒಂದು ತಲೆಮಾರಿನ ಜನರಿಗೆ ಸ್ಪೂರ್ತಿಯಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಹಾದಿಯಲ್ಲಿ ಎಷ್ಟೇ ಕಷ್ಟಗಳಿರಬಹುದು, ನಾವು ನಿಮ್ಮ ಜೊತೆಗಿದ್ದೇವೆ. ನಮ್ಮೆಲ್ಲರ ಪ್ರೀತಿ ನಿಮ್ಮ ಮೇಲಿದೆ’ ಎಂದು ಬರೆದಿರುವ ತಂಡದ ಜೆರ್ಸಿಯನ್ನು ಕೊಹ್ಲಿಗೆ ಉಡುಗೊರೆ ನೀಡಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೊಹ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ