ಶ್ರೀಲಂಕಾ ಸರಣಿಯಲ್ಲಿ ಶಿಖರ್ ಧವನ್ ಗೆ ಆರಂಭಿಕ ಜೋಡಿ ಇವರೇ?

ಸೋಮವಾರ, 28 ಜೂನ್ 2021 (09:20 IST)
ಮುಂಬೈ: ಜುಲೈ 13 ರಿಂದ ಆರಂಭವಾಗಲಿರುವ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಸೀಮಿತ ಓವರ್ ಗಳ ಸರಣಿಗೆ ಆರಂಭಿಕರು ಯಾರು ಎಂಬ ಪ್ರಶ್ನೆ ಮೂಡಿದೆ.


ನಾಯಕ ಶಿಖರ್ ಧವನ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲು ಯುವ ಆಟಗಾರರು ಸರತಿಯಲ್ಲಿದ್ದಾರೆ. ಈಗಾಗಲೇ ಟೀಂ ಇಂಡಿಯಾದಲ್ಲಿ ಅನುಭವವಿರುವ ಪೃಥ್ವಿ ಶಾ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ರನ್ ಮಳೆ ಸುರಿಸಿರುವ ದೇವದತ್ತ್ ಪಡಿಕ್ಕಲ್ ನಡುವೆ ತೀವ್ರ ಪೈಪೋಟಿಯಿದೆ.

ಹೊಸಬರಿಗೆ ಅವಕಾಶ ನೀಡುವುದಾದರೆ ದೇವದತ್ತ್ ಪಡಿಕ್ಕಲ್ ಗೆ ಅವಕಾಶ ಸಿಗಬಹುದು. ಆದರೆ ಪೃಥ್ವಿ ಶಾ ಕೂಡಾ ಕಡಿಮೆಯೇನಲ್ಲ. ಫಾರ್ಮ್ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ಶಾ ದೇಶೀಯ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿದ್ದರಿಂದ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಅನುಭವದ ದೃಷ್ಟಿಯಿಂದ ಅವರಿಗೆ ಅವಕಾಶ ಸಿಗಬಹುದು. ಇವರಲ್ಲದೆ ಐಪಿಎಲ್ ನಲ್ಲಿ ಮಿಂಚಿದ ಋತುರಾಜ್ ಗಾಯಕ್ ವಾಡ್ ಕೂಡಾ ಲಿಸ್ಟ್ ನಲ್ಲಿದ್ದಾರೆ. ಈ ಮೂವರೊಳಗೆ ಒಬ್ಬರನ್ನು ಆಯ್ಕೆ ಮಾಡುವ ತಲೆನೋವು ಧವನ್-ದ್ರಾವಿಡ್ ಜೋಡಿಯದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ