ಭಾರತ-ಇಂಗ್ಲೆಂಡ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದೇಕೆ?
ಚೆನ್ನೈ: ಅಂತಿಮ ಟೆಸ್ಟ್ ಪಂದ್ಯ ಆಡುವ ವೇಳೆ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಆಟಗಾರರು, ಸಹಾಯಕ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ. ಶೋಕ ಸೂಚಕವಾಗಿ ಸಾಮಾನ್ಯವಾಗಿ ಆಟಗಾರರು ಕಪ್ಪು ಪಟ್ಟಿ ಧರಿಸುತ್ತಾರೆ.
ಇಲ್ಲಿಯೂ ಹಾಗೆಯೇ. ಇತ್ತೀಚೆಗಷ್ಟೇ ಮೃತಪಟ್ಟಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಯಲಿತಾ ನಿಧನಕ್ಕೆ ಸಂತಾಪ ಸೂಚಿಸಿ ಆಟಗಾರರೆಲ್ಲರೂ ಕಪ್ಪು ಪಟ್ಟಿ ಧರಿಸಿದ್ದಾರೆ. ಅಲ್ಲದೆ ಪಂದ್ಯ ಆರಂಭಕ್ಕೆ ಮುನ್ನ ಉಭಯ ತಂಡದ ಆಟಗಾರರು ಮೌನಾಚರಿಸಿ ಅಗಲಿದ ನಾಯಕಿಗೆ ಗೌರವ ಸೂಚಿಸಿದರು.
ಈ ನಡುವೆ ಮೊನ್ನೆ ತಲ್ಲಣ ಉಂಟು ಮಾಡಿದ ವಾರ್ಧಾ ಚಂಡಮಾರುತದ ಪರಿಣಾಮ ಮೈದಾನದಲ್ಲಿ ಕಂಡುಬಂತು. ಕ್ಷೇತ್ರ ರಕ್ಷಣೆ ಮಾಡುವಾಗ ಆಟಗಾರರು ಜಾರಿ ಬಿದ್ದ ಪ್ರಸಂಗವೂ ನಡೆಯಿತು.