ಕೊನೆಯ ಕ್ಷಣದಲ್ಲಿ ರೋಹಿತ್ ಶರ್ಮಾ ದ.ಆಫ್ರಿಕಾ ಟಿ20 ಸರಣಿಯಿಂದ ಹೊರಬಂದಿದ್ದೇಕೆ? ಕಾರಣ ಬಯಲು
ತಂಡದ ಆಯ್ಕೆ ಮೊದಲು ರೋಹಿತ್ ಶರ್ಮಾ ಜೊತೆ ಆಯ್ಕೆ ಸಮಿತಿ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿತ್ತು. ಈ ವೇಳೆ ರೋಹಿತ್ ನಾಯಕತ್ವ ವಹಿಸಲು ನಿರಾಕರಿಸಿದರು ಎನ್ನಲಾಗಿದೆ.
ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ರೋಹಿತ್ ಶರ್ಮಾ, ಪತ್ನಿ ರಿತಿಕಾ, ಮಗಳ ಜೊತೆ ಲಂಡನ್ ಪ್ರವಾಸದಲ್ಲಿದ್ದರು. ಸತತ ಕ್ರಿಕೆಟ್ ನಿಂದ ಬಳಲಿರುವ ರೋಹಿತ್ ಸದ್ಯಕ್ಕೆ ವಿಶ್ರಾಂತಿ ಬಯಸಿದ್ದಾರೆ.
ಹೀಗಾಗಿ ಆಫ್ರಿಕಾ ಟಿ20 ಸರಣಿಗೆ ತಂಡದ ನಾಯಕರಾಗಲು ಹಿಂದೇಟು ಹಾಕಿದರು. ಹೀಗಾಗಿ ಅವರನ್ನು ಕೈ ಬಿಡಲಾಯಿತು. ಹಾಗಿದ್ದರೂ ರೋಹಿತ್ ಮುಂದೆ ಟಿ20 ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಲು ಒಪ್ಪಿದರೆ ಅವರೇ ನಾಯಕರಾಗಿ ತಂಡ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.