ಆಸ್ಟ್ರೇಲಿಯಾ ಸರಣಿ ಬಳಿಕ ರೋಹಿತ್, ಕೊಹ್ಲಿ ನಿವೃತ್ತಿಯಾದರೆ ಚಾಂಪಿಯನ್ಸ್ ಟ್ರೋಫಿ ಕತೆಯೇನು

Krishnaveni K

ಶನಿವಾರ, 21 ಡಿಸೆಂಬರ್ 2024 (10:26 IST)
ಮುಂಬೈ: ಟೀಂ ಇಂಡಿಯಾದಲ್ಲಿ ಈಗ ಹಿರಿಯ ಕ್ರಿಕೆಟಿಗರಿಗೆ ನಿವೃತ್ತಿಯ ಕಾಲ. ಮೂಲಗಳ ಪ್ರಕಾರ ಆಸ್ಟ್ರೇಲಿಯಾ ಸರಣಿ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ನಿವೃತ್ತಿಯಾದರೂ ಅಚ್ಚರಿಯಿಲ್ಲ. ಹಾಗಿದ್ದರೆ ಚಾಂಪಿಯನ್ಸ್ ಟ್ರೋಫಿ ಕತೆಯೇನು ಎಂಬ ಪ್ರಶ್ನೆ ಮೂಡಿದೆ.

ಕಳೆದ ಬಾರಿ ಟಿ20 ವಿಶ್ವಕಪ್ ಫೈನಲ್ ಗೆಲುವಿನ ನಂತರ ರೋಹಿತ್, ಕೊಹ್ಲಿ, ರವೀಂದ್ರ ಜಡೇಜಾ ಟಿ20 ಫಾರ್ಮ್ಯಾಟ್ ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ಬಾಕಿಯಿದೆ. ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದೆ.

ಆ ಪಂದ್ಯದ ಬಳಿಕ ರೋಹಿತ್ ಶರ್ಮಾ ನಿವೃತ್ತಿಯಾಗುವುದು ಬಹುತೇಕ ಖಚಿತವೆನ್ನಲಾಗುತ್ತಿದೆ. ವಿರಾಟ್ ಕೊಹ್ಲಿಯೂ ನಿವೃತ್ತಿಯ ಚಿಂತನೆಯಲ್ಲಿದ್ದಾರೆ. ಈ ಇಬ್ಬರೂ ಇದೇ ಸರಣಿ ಬಳಿಕ ನಿವೃತ್ತಿಯಾದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಬ್ಬರೂ ಆಡಲ್ವಾ ಎನ್ನುವುದೇ ಅಭಿಮಾನಿಗಳ ಆತಂಕವಾಗಿದೆ.

ಫಾರ್ಮ್ ನಲ್ಲಿರಲಿ, ಇಲ್ಲದೆ ಇರಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರೂ ಆಟಗಾರರನ್ನು ಅಭಿಮಾನಿಗಳು ನೋಡಲು ಬಯಸುತ್ತಾರೆ. ರೋಹಿತ್ ಕೂಡಾ ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡುವ ಭರವಸೆ ನೀಡಿದ್ದರು. ಹೀಗಾಗಿ ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ಗೆ ಮಾತ್ರ ನಿವೃತ್ತಿ ಹೇಳಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಏಕದಿನ ಫಾರ್ಮ್ಯಾಟ್ ಗೂ ನಿವೃತ್ತಿ ಹೇಳುವ ಸಾಧ್ಯತಯಿದೆ ಎನ್ನಲಾಗಿದೆ. ಯಾಕೆಂದರೆ ರೋಹಿತ್-ಕೊಹ್ಲಿ ಭಾರತ ತಂಡದ ಆಧಾರಸ್ತಂಬಗಳು. ಈ ಇಬ್ಬರೂ ಏಕಕಾಲಕ್ಕೆ ನಿವೃತ್ತಿಯಾದರೆ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ