ಐಪಿಎಲ್: ಗೆಲುವಿನ ಮೂಲಕ ಅನುಷ್ಕಾಗೆ ಬರ್ತ್ ಡೇ ಗಿಫ್ಟ್ ಕೊಡುತ್ತಾರಾ ವಿರಾಟ್ ಕೊಹ್ಲಿ?

ಸೋಮವಾರ, 30 ಏಪ್ರಿಲ್ 2018 (08:17 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಐಪಿಎಲ್ ಕೂಟವೂ ಯಾಕೋ ಹತಾಶೆ ನೀಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ತಂಡಕ್ಕೆ ನಾಳೆ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರಾಳಿ.
 

ಮುಂಬೈ ಮೊನ್ನೆಯ ಪಂದ್ಯದಲ್ಲಿ ಗೆದ್ದು ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆದರೆ ಆರ್ ಸಿಬಿಗೆ ಇದೀಗ ಗೆಲುವು ಅನಿವಾರ್ಯವಾಗಿದೆ. ಆದರೆ ಕೊಹ್ಲಿ, ಎಬಿಡಿ ವಿಲಿಯರ್ಸ್ ಬಿಟ್ಟರೆ ಬೇರೆ ಯಾರೂ ಸಿಡಿಯುತ್ತಿಲ್ಲ ಎನ್ನುವುದೇ ಚಿಂತೆಯಾಗಿದೆ.

ಸದಾ ತಮ್ಮ ಪತ್ನಿ ಅನುಷ್ಕಾ ಶರ್ಮಾ ತಮ್ಮ ಸ್ಪೂರ್ತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕವಾದರೂ ಗೆದ್ದು ಮೇ 1 ರಂದು ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಪತ್ನಿಗೆ ಗೆಲುವಿನ ಉಡುಗೊರೆ ಕೊಡುತ್ತಾರಾ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ