ಮಹಿಳಾ ಟಿ20 ವಿಶ್ವಕಪ್: ಇಂದು ಮಳೆ ಬಂದರೆ ಪಂದ್ಯದ ಗತಿ ಏನಾಗುತ್ತೆ?

ಭಾನುವಾರ, 8 ಮಾರ್ಚ್ 2020 (09:44 IST)
ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಒಂದು ವೇಳೆ ಇಂದು ಮಳೆ ಸುರಿದು ಪಂದ್ಯ ನಡೆಸಲು ಸಾಧ‍್ಯವಾಗದೇ ಇದ್ದರೆ ಏನಾಗಬಹುದು?


ಸೆಮಿಫೈನಲ್ ಪಂದ್ಯದಲ್ಲಿ ಮಳೆ ಬಂದ ಕಾರಣ, ಮೀಸಲು ದಿನ ಇಲ್ಲದೇ ಹೋಗಿದ್ದರಿಂದ ಲೀಗ್ ಹಂತದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ಭಾರತ ಫೈನಲ್ ಗೇರಿತ್ತು. ಇದೀಗ ಫೈನಲ್ ನಲ್ಲಿ ಅತಿಥೇಯ ಆಸ್ಟ್ರೇಲಿಯಾ ಜತೆ ಸೆಣಸಬೇಕಿದೆ.

ಒಂದು ವೇಳೆ ಇಂದು ಮಳೆ ಬಂದರೆ ನಾಳೆ ಮೀಸಲು ದಿನವಿದ್ದು, ಪಂದ್ಯ ನಾಳೆ ಆಯೋಜನೆಯಾಗಲಿದೆ. ಒಂದು ವೇಳೆ ನಾಳೆಯೂ ಸಂಪೂರ್ಣ ಮಳೆಗಾಹುತಿಯಾದರೆ ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ