ವಿಶ್ವಕಪ್ 2019: ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಯಾರಾಗ್ತಾರೆ ಎದುರಾಳಿ? ಇಲ್ಲಿದೆ ಲೆಕ್ಕಾಚಾರ

ಶುಕ್ರವಾರ, 5 ಜುಲೈ 2019 (09:02 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಇದೀಗ ಸೆಮಿಫೈನಲ್ ಗೆ ತಲುಪಲಿರುವ ತಂಡಗಳ ಪಟ್ಟಿ ಅಂತಿಮವಾಗಿದೆ.


ಆದರೆ ಯಾವೆಲ್ಲಾ ತಂಡಗಳು ಸೆಮಿಫೈನಲ್ ನಲ್ಲಿ ಎದುರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಭಾರತಕ್ಕೆ ಇನ್ನು ಒಂದು ಲೀಗ್ ಮ್ಯಾಚ್ ಬಾಕಿಯಿದ್ದು, ಸೆಮಿಫೈನಲ್ ನಲ್ಲಿ ಎದುರಾಳಿ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.

ಅತ್ತ ಆಸ್ಟ್ರೇಲಿಯಾಕ್ಕೂ ಒಂದು ಪಂದ್ಯ ಬಾಕಿಯಿದೆ. ಒಂದು ವೇಳೆ ಭಾರತ ಶ್ರೀಲಂಕಾ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ದ.ಆಫ್ರಿಕಾ ವಿರುದ್ಧ ಸೋತರೆ ಭಾರತಕ್ಕೆ ಜುಲೈ 9 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಳಿಯಾಗಲಿದೆ.

ಒಂದು ವೇಳೆ ಭಾರತವೂ ಗೆದ್ದು, ಆಸ್ಟ್ರೇಲಿಯಾವೂ ಗೆದ್ದರೆ ಭಾರತಕ್ಕೆ ಅತಿಥೇಯ ಇಂಗ್ಲೆಂಡ್ ಸೆಮಿಫೈನಲ್ ನಲ್ಲಿ ಎದುರಾಳಿಯಾಗಲಿದೆ. ಈಗಿನ ಪರಿಸ್ಥಿತಿ ನೋಡಿದರೆ ಈ ಸಾಧ್ಯತೆಯೇ ಹೆಚ್ಚು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ