INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್
ಟಾಸ್ ವೇಳೆ ಉಭಯ ನಾಯಕರು ಕೈ ಕುಲುಕುತ್ತಾರೋ ಇಲ್ಲವೋ ಎಂಬುದರ ಮೇಲೆಯೇ ಎಲ್ಲರ ಗಮನವಿತ್ತು. ಆದರೆ ಇದರ ನಡುವೆ ಪಾಕ್ ನಾಯಕಿ ಮಾಡಿದ ಮಹಾ ಮೋಸ ಯಾರಿಗೂ ಕಾಣದೇ ಹೋಯ್ತು.
ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಕಾಯಿನ್ ಚಿಮ್ಮಿಸುವಾಗ ಪಾಕ್ ನಾಯಕಿ ಫಾತಿಮಾ ಟೈಲ್ಸ್ ಎಂದು ಹೇಳಿದ್ದರು. ಇದು ಕ್ಯಾಮರಾಗಳಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಆದರೆ ಮ್ಯಾಚ್ ರೆಫರಿ ಹೆಡ್ಸ್ ಹೇಳಿದ್ದಾರೆ ಎಂದುಕೊಂಡು ಇದು ಹೆಡ್ಸ್ ನೀವು ಟಾಸ್ ಗೆದ್ದಿದ್ದೀರಿ ಎಂದು ಪಾಕಿಸ್ತಾನ ನಾಯಕಿಯತ್ತ ಕೈ ತೋರಿಸಿದರು.
ಆಗ ಪಾಕಿಸ್ತಾನ ನಾಯಕಿ ಕೂಡಾ ಇಲ್ಲ ನಾನು ಟೈಲ್ಸ್ ಹೇಳಿದ್ದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳದೇ ತಾವೇ ಟಾಸ್ ಗೆದ್ದಂತೆ ಮೈಕ್ ಹಿಡಿದು ಮಾತನಾಡಲು ಹೋದರು. ಹೀಗಾಗಿ ಭಾರತವೇ ಟಾಸ್ ಗೆದ್ದರೂ ಅಧಿಕೃತವಾಗಿ ಪಾಕಿಸ್ತಾನ ಟಾಸ್ ಗೆದ್ದಿದೆ ಎಂದು ದಾಖಲಾಯಿತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರತೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ತಪ್ಪನ್ನು ಭಾರತ ಮಾಡಿದ್ದರೆ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಲಾಬಿ ಎಂದೆಲ್ಲಾ ದೂರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.