ವಿಶ್ವಕಪ್ 2019: ಭಾರತ-ಪಾಕ್ ಪಂದ್ಯಕ್ಕೆ ಮಳೆ ಬರಬಹುದೇ? ಹವಾಮಾನ ವರದಿ ಹೇಗಿದೆ?

ಭಾನುವಾರ, 16 ಜೂನ್ 2019 (09:05 IST)
ಲಂಡನ್: ಇಂದು ವಿಶ್ವಕಪ್ ಕೂಟದಲ್ಲಿ ವಿಶ್ವವೇ ಎದುರು ನೋಡುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಪಂದ್ಯ ನಡೆಯಬಹುದೇ ಅಥವಾ ಮಳೆ ಮತ್ತೆ ಕಾಟ ಕೊಡಬಹುದೇ ಎಂಬ ಆತಂಕದಲ್ಲಿದ್ದಾರೆ.


ಯಾಕೆಂದರೆ ಹವಾಮಾನ ಇಲಾಖೆಯ ವರದಿಯೂ ಆತಂಕಪಡುವಂತೆಯೇ ಇದೆ. ಪಂದ್ಯ ಸ್ಥಳೀಯ ಕಾಲಮಾನ ಪ್ರಕಾರ 10.30 ಕ್ಕೆ ಆರಂಭವಾಗಲಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಸಣ್ಣನೆಯ ಮಳೆ ಬರುವ ಸಾಧ್ಯತೆಯಿದೆ.

ಹೀಗಾಗಿ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಇದು ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡಲು ಕಾತುರರಾಗಿ ಕಾಯುತ್ತಿರುವವರಿಗೆ ಬ್ಯಾಡ್ ನ್ಯೂಸ್. ಮಳೆ ಬಂದು ಡಕ್ ವರ್ತ್ ಲೂಯಿಸ್ ನಿಯಮ ಜಾರಿ ಮಾಡಿದರೆ ಸರಿಯಾದ ಫಲಿತಾಂಶ ಬರುವುದಿಲ್ಲ. ಒಂದು ತಂಡಕ್ಕೆ ಅನ್ಯಾಯವಾಗುವುದು. ಆಗ ಪಂದ್ಯದ ರಿಯಲ್ ಮಜಾ ಸಿಗದು ಎನ್ನುವುದೇ ಅಭಿಮಾನಿಗಳ ಆತಂಕವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ