ಅತೀ ವೇಗದ 200 ಟೆಸ್ಟ್ ವಿಕೆಟ್ ದಾಖಲೆಯನ್ನು ಅಶ್ವಿನ್ ಮುರಿಯುವರೇ?

ಶನಿವಾರ, 23 ಜುಲೈ 2016 (12:26 IST)
ರವಿ ಚಂದ್ರನ್ ಅಶ್ವಿನ್ ಭಾರತದ ಪ್ರಸಕ್ತ ಶ್ರೇಷ್ಟ ಸ್ಪಿನ್ ಬೌಲಿಂಗ್ ಪ್ರತಿಭೆಯಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ವಿಶೇಷ ದಾಖಲೆ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. 32 ಟೆಸ್ಟ್ ಪಂದ್ಯಗಳಿಂದ 176 ವಿಕೆಟ್ ಕಬಳಿಸಿರುವ ಅಶ್ವಿನ್ ಅವರಿಗೆ ಪ್ರಸಕ್ತ ಸರಣಿಯಲ್ಲಿ ಅತೀ ವೇಗದ 200 ವಿಕೆಟ್‌ ಕಬಳಿಸುವ ಅವಕಾಶ ಒದಗಿಬಂದಿದೆ.

25.3 ಸರಾಸರಿಯೊಂದಿಗೆ ಅಶ್ವಿನ್ ಪರಿಣಾಮಕಾರಿ ರೇಟ್‌ನೊಂದಿಗೆ ವಿಕೆಟ್ ಕಬಳಿಸಿದ್ದು, ವೆಸ್ಟ್ ಇಂಡೀಸ್ ತಂಡದ ಅನನುಭವ ಪರಿಗಣಿಸಿ ಅಶ್ವಿನ್ ಸರಣಿಯ ಕೊನೆಯಲ್ಲಿ ಪ್ರಮುಖ ವಿಕೆಟ್ ಗಳಿಸಿದವರಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ 200 ವಿಕೆಟ್ ಕಬಳಿಸಿದ ದಾಖಲೆ ಆಸ್ಟ್ರೇಲಿಯಾದ ಕ್ಲಾರೆನ್ಸ್ ಗ್ರಿಮೆಟ್ ಹೆಸರಿನಲ್ಲಿದ್ದು, ಅವರು 36 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಸಾಧನೆ ಮಾಡಿದ್ದಾರೆ.
 
  ಅಶ್ವಿನ್ ಅವರು ಜಾಸೋನ್ ಹೋಲ್ಡರ್ ಬಳಗದ ವಿರುದ್ಧ ಇನ್ನೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದು, ಇತಿಹಾಸ ಪುಟದಲ್ಲಿ ತಮ್ಮ ಹೆಸರು ದಾಖಲಿಸಲು ಸರಣಿಯಲ್ಲಿ 24 ವಿಕೆಟ್ ಕಬಳಿಸುವ ಆಶಯ ಹೊಂದಿದ್ದಾರೆ.
 
 ದಕ್ಷಿಣ ಆಫ್ರಿಕಾ ವಿರುದ್ಧ 4 ಟೆಸ್ಟ್ ಸರಣಿಯಲ್ಲಿ 31 ವಿಕೆಟ್ ಕಬಳಿಸಿದ ಅಶ್ವಿನ್, ಈ ಸಾಧನೆ ಮಾಡಲು ಸಾಧ್ಯವಿಲ್ಲವೆನ್ನುವುದಕ್ಕೆ ಯಾವುದೇ ಕಾರಣವಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ