ಡಬ್ಲ್ಯುಪಿಎಲ್: ಇಂದು ಪ್ರಬಲ ಮುಂಬೈ-ಡೆಲ್ಲಿ ನಡುವಿನ ಕಾಳಗ

ಗುರುವಾರ, 9 ಮಾರ್ಚ್ 2023 (08:50 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇಂದು ಪ್ರಬಲ ತಂಡಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಸೆಣಸಾಡಲಿವೆ.

ಇದುವರೆಗೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳೂ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿವೆ. ಎರಡೂ ತಂಡಗಳೂ 200 ಪ್ಲಸ್ ರನ್ ಪೇರಿಸಬಲ್ಲ ಬ್ಯಾಟಿಗರನ್ನು ಹೊಂದಿದ್ದಾರೆ.

ಡೆಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅತ್ತ ಮುಂಬೈ ನಾಯಕಿ ಹರ್ಮನ್ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಹೀಗಾಗಿ ಈ ಪಂದ್ಯ ಸಮಬಲರ ಕಾಳಗವಾಗಿರುವುದರಿಂದ ರೋಚಕತೆ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ