ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನ ಮೊದಲ ದಿನವೇ ಮಳೆಯ ಆಗಮನವಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ.
ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಮಳೆ ನಿಲ್ಲುವಂತೆ ಪ್ರಾರ್ಥನೆ ಮಾಡಿದ್ದಾರೆ.
ರೈನ್ ರೈನ್ ಗೋ ಅವೇ.. ಪ್ಲೀಸ್ ಮುಂದಿನ ಐದು ದಿನ ಬರಬೇಡ ಎಂದು ಅನುಷ್ಕಾ ಪ್ರಾರ್ಥನೆ ಮಾಡಿದ್ದಾರೆ. ಅನುಷ್ಕಾ ಜೊತೆಗೆ ಇಡೀ ಕ್ರಿಕೆಟ್ ಪ್ರೇಮಿಗಳೇ ಈಗ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಾರೆ.