ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಟೀಂ ಇಂಡಿಯಾ ಪ್ರಕಟ

ಬುಧವಾರ, 16 ಜೂನ್ 2021 (10:54 IST)
ಮುಂಬೈ: ಜೂನ್ 18 ರಿಂದ ನ್ಯೂಜಿಲೆಂಡ್ ವಿರುದ್ಧ ಸೌಥಾಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ 15 ಸದಸ್ಯರ ತಂಡ ಪ್ರಕಟಿಸಿದೆ.


ಈ ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಸ್ಪಿನ್ನರ್ ಅಕ್ಸರ್ ಪಟೇಲ್, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿಲ್ಲ.

ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಶುಬ್ನಂ ಗಿಲ್ ಆಡುವುದು ಪಕ್ಕಾ ಆಗಿದೆ. ವೇಗಿಗಳ ಪೈಕಿ ಇಶಾಂತ್, ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹೆಸರಿದೆ. ಇವರ ಪೈಕಿ ಅಂತಿಮವಾಗಿ ಆಡುವವರು ಯಾರು ತಿಳಿಯಬೇಕಿದೆ.  ಸ್ಪಿನ್ ವಿಭಾಗದಲ್ಲಿ ಹಿರಿಯ ರವಿಚಂದ್ರನ್ ಅಶ್ವಿನ್ ಗೆ ರವೀಂದ್ರ ಜಡೇಜಾ ಸಾಥ್ ಕೊಡಲಿದ್ದಾರೆ. ಉಳಿದಂತೆ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ವಿಕೆಟ್ ಕೀಪರ್ ಗಳ ಪೈಕಿ ರಿಷಬ್ ಪಂತ್ ಮತ್ತು ವೃದ್ಧಿಮಾನ್ ಸಹಾ ಇಬ್ಬರೂ ಸ್ಥಾನ ಪಡೆದಿದ್ದಾರೆ. ಈ ಪೈಕಿ ರಿಷಬ್ ಪಂತ್ ಅಂತಿಮವಾಗಿ ಆಯ್ಕೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ