ದ್ವಿಶತಕ ಗಳಿಸಲಾಗದೇ ನಿರಾಸೆ ಅನುಭವಿಸಿದ ಯಶಸ್ವಿ ಜೈಸ್ವಾಲ್

ಶುಕ್ರವಾರ, 14 ಜುಲೈ 2023 (20:34 IST)
ಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ 171 ರನ್ ಗಳಿಗೆ ಔಟಾಗಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದು ರೋಹಿತ್ ಶರ್ಮಾ ಜೊತೆ ದ್ವಿಶತಕದ ಜೊತೆಯಾಟವಾಡಿದ್ದಲ್ಲದೆ, ಕೊಹ್ಲಿ ಜೊತೆ ಶತಕದ ಜೊತೆಯಾಟವಾಡಿದ್ದರು. ಶತಕ ಸಿಡಿಸಿದ ದಾಖಲೆ ಮಾಡಿದ್ದ ಜೈಸ್ವಾಲ್ ಇಂದು ದ್ವಿಶತಕ ಸಿಡಿಸಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಲ್ಝಾರಿ ಜೊಸೆಫ್ ಎಸೆತದಲ್ಲಿ 171 ರನ್ ಗಳಿಗೆ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 350 ರನ್ ಗಳಿಸಿದೆ. ವಿರಾಟ್ ಕೊಹ್ಲಿ 46 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ 200 ರನ್ ಗಳ ಮುನ್ನಡೆ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ