ಇಂಗ್ಲೆಂಡ್ ತಂಡವನ್ನು ಮತ್ತೊಮ್ಮೆ ಕಾಡಲು ಯಾಸಿರ್ ಫಿಟ್

ಶುಕ್ರವಾರ, 22 ಜುಲೈ 2016 (12:55 IST)
ತಮ್ಮ ಸ್ಟಾರ್ ಸ್ಪಿನ್ನರ್ ಯಾಸಿರ್ ಶಾಹ್ ನೆಟ್‌ನಲ್ಲಿ ಅಭ್ಯಾಸ ಮಾಡುವಾಗ ಭುಜಕ್ಕೆ ಪೆಟ್ಟುಬಿದ್ದಿದ್ದು ಆತಂಕಕಾರಿ ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.  ಯಾಸಿರ್ ಅವರನ್ನು ಮುನ್ನೆಚ್ಚರಿಕೆ ಸಲುವಾಗಿ ಸ್ಕಾನ್‌ಗೆ ಕಳಿಸಲಾಯಿತು. ಆದರೆ ಅವರು ಪಂದ್ಯಕ್ಕೆ ಆಡುವುದು ಖಚಿತವಾಗಿದೆ ಎಂದು ಮಿಸ್ಬಾ ಹೇಳಿದ್ದು, ಸ್ಪಿನ್ನರುಗಳಿಗೆ ನೆರವಾಗುವ ಇತಿಹಾಸ ಹೊಂದಿರುವ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇನ್ನೊಂದು ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ.
 
ಪಾಕಿಸ್ತಾನ ದಾಳಿಯ ಮುಖ್ಯ ಅಸ್ತ್ರವಾಗಿರುವ ಯಾಸಿರ್ ಕಳೆದ ವರ್ಷ ಬೆನ್ನುನೋವಿನಿಂದ ಅಬುದಾಬಿಯಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ ಮಿಸ್ ಮಾಡಿಕೊಂಡಿದ್ದರು. ಯಾಸಿರ್ ವಾಪಸಾದಾಗಿನಿಂದ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಸತತವಾಗಿ ಮೂರು ಪಂದ್ಯಗಳಲ್ಲಿ ಜಯಗಳಿಸಿದೆ. ದುಬೈ, ಶಾರ್ಜಾ ಮತ್ತು ಲಾರ್ಡ್ಸ್ ಮೈದಾನಗಳಲ್ಲಿ ನಡೆದ ಪಂದ್ಯಗಳಲ್ಲಿ ಅವರು ಒಟ್ಟು 25 ವಿಕೆಟ್ ಕಬಳಿಸಿದ್ದರು.

ಯಾವುದೇ ಮೈದಾನವಾಗಿರಲಿ, ಬೌಲರ್ ನಿಜವಾಗಲೂ ಉತ್ತಮ ಬೌಲಿಂಗ್ ಮಾಡಿದರೆ ಫಲಿತಾಂಶವನ್ನು ತರಬಹುದು. ಲಾರ್ಡ್ಸ್‌‍ನಲ್ಲಿ ಯಾಸಿರ್ ಮನೋಜ್ಞವಾಗಿ ಬೌಲ್ ಮಾಡಿದರು. ಯಾಸಿರ್ ಸೇರಿದಂತೆ ಎಲ್ಲಾ ನಾಲ್ವರು ತಮ್ಮ ಬೌಲಿಂಗ್ ಚುರುಕುಗೊಳಿಸಬೇಕು ಎಂದು ಮಿಸ್ಬಾ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ