ಬೆಡಗಿ ಜೊತೆ ಫೋಟೋ: ಪತ್ನಿ ಮೇಲೆ ಸೇಡು ತೀರಿಸಿಕೊಂಡರಾ ಯಜುವೇಂದ್ರ ಚಾಹಲ್?!

ಬುಧವಾರ, 5 ಜುಲೈ 2023 (08:10 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಸುಂದರ ಯುವತಿಯೊಂದಿಗಿರುವ ಫೋಟೋವೊಂದು ಈಗ ವೈರಲ್ ಆಗಿದೆ.

ಆಕೆ ಬೇರಾರೂ ಅಲ್ಲ, ದ.ಆಫ್ರಿಕಾ ಮೂಲದ ಚೆಸ್ ತಾರೆ ಜೆಸಿ ಎನ್ನುವುದು ತಿಳಿದುಬಂದಿದೆ. ದುಬೈನಲ್ಲಿ ನಡೆದಿದ್ದ ಗ್ಲೋಬಲ್ ಚೆಸ್ ಲೀಗ್ ನಲ್ಲಿ ಭಾಗಿಯಾಗಿದ್ದಾಗ ಜೆಸಿ ಕ್ರಿಕೆಟಿಗ ಚಾಹಲ್ ಜೊತೆ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.

ಆದರೆ ಇದನ್ನು ನೋಡಿದ ನೆಟ್ಟಿಗರು ಬೇರೆಯದೇ ಅರ್ಥ ಕಲ್ಪಿಸಿಕೊಂಡು ಟ್ರೋಲ್ ಮಾಡಿದ್ದಾರೆ. ಕೆಲವು ಸಮಯದ ಮೊದಲು ಚಾಹಲ್ ಪತ್ನಿ ಧನಶ್ರೀ ವರ್ಮ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆಗಿರುವ ಫೋಟೋ ವೈರಲ್ ಆಗಿತ್ತು. ಈಗ ಚಾಹಲ್ ಪತ್ನಿ ಮೇಲೆ ಈ ರೀತಿ ಬೇರೊಬ್ಬ ಯುವತಿಯೊಂದಿಗೆ ಕ್ಲೋಸ್ ಆಗಿ ಫೋಟೋ ತೆಗೆಸಿಕೊಂಡು ಅಂದು ಶ್ರೇಯಸ್ ಜೊತೆ ಫೋಟೋ ತೆಗೆಸಿಕೊಂಡು ತನ್ನ ಹೊಟ್ಟೆ ಉರಿಸಿದ್ದ ಪತ್ನಿ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ