ಕೇರಳದ ಪಂಪಾನದಿಯಲ್ಲಿ ಸ್ನೇಕ್ ಬೋಟ್ ಮಗುಚಿಕೊಂಡು ಕರ್ನಾಟಕದ ಕ್ರಿಕೆಟ್ ಆಟಗಾರ ಕರುಣ್ ನಾಯರ್ ಕೂದಳೆಲೆಯ ಅಂತರದಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇಬ್ಬರು ಯುವಕರು ಇನ್ನೂ ದೋಣಿಯಿಂದ ನಾಪತ್ತೆಯಾಗಿದ್ದು ದೋಣಿಯಲ್ಲಿ ಸುಮಾರು 100 ಜನರು ಪ್ರಯಾಣಿಸುತ್ತಿದ್ದರು. ಪಾರ್ಥಸಾರಥಿ ಮಂದಿರದ ದೇವಾಲಯದ ಉತ್ಸವ ವಲ್ಲಾ ಸಾದ್ಯಾದಲ್ಲಿ ಭಾಗವಹಿಸಲು ನಾಯರ್ ಇನ್ನಿತರರ ಜತೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.