ರಾಹುಲ್ ದ್ರಾವಿಡ್ ರಂತಾಗಲು ಒಪ್ಪದ ಪಾಕ್ ಕ್ರಿಕೆಟಿಗ ಯೂನಿಸ್ ಖಾನ್

ಮಂಗಳವಾರ, 7 ಮೇ 2019 (07:48 IST)
ಇಸ್ಲಾಮಾಬಾದ್: ಭಾರತದ ಅಂಡರ್ 19 ಕೋಚ್ ಆಗಿ ರಾಹುಲ್ ದ್ರಾವಿಡ್ ಯುವ ಕ್ರಿಕೆಟಿಗರನ್ನು ತಯಾರು ಮಾಡುತ್ತಿರುವ ರೀತಿಯಿಂದ ಸ್ಪೂರ್ತಿ ಪಡೆದ ಪಾಕ್ ಕ್ರಿಕೆಟ್ ಮಂಡಳಿ ಯೂನಿಸ್ ಖಾನ್ ರನ್ನು ತಮ್ಮ ಅಂಡರ್ 19 ತಂಡಕ್ಕೆ ಕೋಚ್ ಆಗಿ ನೇಮಕ ಮಾಡಲು ಚಿಂತನೆ ನಡೆಸಿತ್ತು.


ಆದರೆ ಪಾಕ್ ಕ್ರಿಕೆಟ್ ಮಂಡಳಿ ಪ್ರಸ್ತಾಪವನ್ನು ಯೂನಿಸ್ ತಿರಸ್ಕರಿಸಿದ್ದು, ದ್ರಾವಿಡ್ ರಂತಾಗಲು ಒಪ್ಪಿಕೊಂಡಿಲ್ಲ. ಯುವ ಕ್ರಿಕೆಟಿಗರಿಗೆ ಹಿರಿಯ, ಅನುಭವಿ ಆಟಗಾರರಿಂದ ತರಬೇತು ಕೊಡಿಸಿದರೆ ಉತ್ತಮ ಪ್ರತಿಭಾವಂತ ಕ್ರಿಕೆಟಿಗರನ್ನು ತಯಾರು ಮಾಡಬಹುದು ಎಂಬುದು ಪಾಕ್ ಮಂಡಳಿ ಲೆಕ್ಕಾಚಾರವಾಗಿತ್ತು.

ಆದರೆ ಅದನ್ನು ಯೂನಿಸ್ ಒಪ್ಪಿಕೊಂಡಿಲ್ಲ. ಯೂನಿಸ್ ಖಾನ್ ತನಗೆ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದೆಲ್ಲಾ ಬೇಡಿಕೆಯಿಟ್ಟಿದ್ದು, ಪಾಕ್ ಮಂಡಳಿ ಇದನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ