‘ನಮ್ಮ ಬೌಲಿಂಗ್ ನೋಡಿ ವಿರಾಟ್ ಕೊಹ್ಲಿಗೆ ತನ್ನ ಸಾಮರ್ಥ್ಯದ ಮೇಲೇ ಅನುಮಾನವಾಗಬೇಕು’

ಗುರುವಾರ, 16 ಫೆಬ್ರವರಿ 2017 (11:17 IST)
ಮುಂಬೈ: ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಟೀಂ ಇಂಡಿಯಾದ ವಿರುದ್ಧ ಯಾರೇ ಆಡಲಿ. ವಿರಾಟ್ ಕೊಹ್ಲಿ ಮೇಲೆ ಮುಗಿ ಬೀಳಲು ತಂತ್ರ ಹೆಣೆಯುತ್ತಿರುತ್ತಾರೆ. ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಆಸ್ಟ್ರೇಲಿಯಾ ತಂಡಕ್ಕೂ ಕೊಹ್ಲಿ ಜ್ವರ ಹಿಡಿದಿದೆ.

 
ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ಕೊಹ್ಲಿಗಾಗಿ ತಮ್ಮ ತಂಡ ರಣತಂತ್ರ ರೂಪಿಸಿದೆ ಎಂದಿದ್ದಾರೆ. ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರನ್ನು ಸಿಲ್ಲಿ ರನೌಟ್, ಆಕಸ್ಮಿಕವಾಗಿ ಔಟ್ ಮಾಡುವ ಮೂಲಕ ಅವರ ತಾಂತ್ರಿಕತೆಯಲ್ಲಿ ಅವರಿಗೇ ಅಪನಂಬಿಕೆ ಹುಟ್ಟಿಸುವ ಹಾಗೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನೇ ತನ್ನ ತಂಡದ ಸಹ ಆಟಗಾರರಿಗೂ ಮ್ಯಾಕ್ಸ್ ವೆಲ್ ಹೇಳಿದ್ದಾರಂತೆ. ಆದರೆ ಕೊಹ್ಲಿ ಅಷ್ಟು ಸುಲಭಕ್ಕೆ ಬಲೆಗೆ ಬೀಳುವ ಮಿಕವಲ್ಲ ಎಂದು ಪಾಪ ಆಸೀಸ್ ಹುಡುಗರಿಗೆ ಇನ್ನಷ್ಟೇ ಗೊತ್ತಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ