ಕೋಚ್ ಅನಿಲ್ ಕುಂಬ್ಳೆ ನೀಡಿದ ಈ ಚಾಲೆಂಜ್ ಸಾಧಿಸಿದ್ದ ಅಜಿಂಕ್ಯಾ ರೆಹಾನೆ

ಶುಕ್ರವಾರ, 13 ಜನವರಿ 2017 (10:18 IST)
ಮುಂಬೈ:  ಅನಿಲ್ ಕುಂಬ್ಳೆ ಕೋಚ್ ಆದಾಗಿನಿಂದ ಟೀಂ ಇಂಡಿಯಾ ಆಟಗಾರರಿಗೆ ಹೊಸ ಹೊಸ ಸವಾಲು ಕೊಡುತ್ತಲೇ ಇದ್ದಾರೆ. ಕಳೆದ ವರ್ಷ ಅವರು ಹೊಸ ಸವಾಲು ನೀಡಿದ್ದರು. ಆದರೆ ಈ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದು, ಅಜಿಂಕ್ಯಾ ರೆಹಾನೆ ಮಾತ್ರ.  ನಿನ್ನೆಯ ಅಭ್ಯಾಸ ಪಂದ್ದಲ್ಲಿ ಮತ್ತೆ ಅದನ್ನು ಸಾಧಿಸಿ ತೋರಿಸಿದ್ದಾರೆ. ಏನದು? ಈ ಸುದ್ದಿ ಓದಿ.


ಒಬ್ಬ ಬ್ಯಾಟ್ಸ್ ಮನ್ ಔಟಾಗದೆ ಕನಿಷ್ಠ ಒಂದು ಗಂಟೆ ಕ್ರೀಸ್ ನಲ್ಲಿರಬೇಕೆಂಬುದು ಆ ಚಾಲೆಂಜ್ ಆಗಿತ್ತು. ಕಳೆದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುನ್ನ ಕುಂಬ್ಳೆ ತಮ್ಮ ಹುಡುಗರಿಗೆ ಈ ಚಾಲೆಂಜ್ ನೀಡಿದ್ದರು. ಇದರಲ್ಲಿ ಕೊಹ್ಲಿ, ಧೋನಿ ಎಲ್ಲರೂ ವಿಫಲರಾದರೂ, ರೆಹಾನೆ ಮಾತ್ರ ಸತತ ಒಂದು ಗಂಟೆ ಔಟಾಗದೇ ಕ್ರೀಸ್ ನಲ್ಲಿದ್ದರು.

ಸುಮಾರು ಒಂದು ಗಂಟೆಗಳ ಕಾಲ ಕ್ರೀಸ್ ಆಕ್ರಮಿಸಿ, 91 ರನ್ ಗಳಿಸಿ, ನಾಯಕನಾಗಿ ಇತರರಿಗೆ ಮಾದರಿಯಾಗಿ ಬ್ಯಾಟಿಂಗ್ ನಡೆಸಿ ತಂಡವನ್ನು ಎರಡನೇ ಅಭ್ಯಾಸ ಪಂದ್ಯದಲ್ಲಿ ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಇನ್ನೊಂದೆಡೆ ಭರವಸೆಯ ವಿಕೆಟ್ ಕೀಪರ್, ಧೋನಿ ನಂತರ ಟೀಂ ಇಂಡಿಯಾಕ್ಕೆ ಸಿಕ್ಕಿದ ವಿಕೆಟ್ ಕೀಪರ್ ಎಂದೇ ಪರಿಗಣಿತವಾಗಿರುವ ರಿಷಬ್ ಪಂತ್ ಕೂಡಾ ಕೇವಲ 36 ಎಸೆತಗಳಲ್ಲಿ 59 ರನ್ ಗಳಿಸಿದರು.

ಅಂತೂ ಮೊನ್ನೆ ಧೋನಿಗೆ ಸಾಧ್ಯವಾಗದ್ದನ್ನು ರೆಹಾನೆ ಸಾಧಿಸಿ ತೋರಿಸಿದರು. ನಿನ್ನೆಯ ಪಂದ್ಯದಲ್ಲಿ ಯುವ ಆಟಗಾರರೇ ಹೆಚ್ಚಿದ್ದರೆ, ಮೊದಲ ಅಭ್ಯಾಸ ಪಂದ್ಯದಲ್ಲಿ ಹಿರಿಯರ ಸಂಖ್ಯೆ ಜಾಸ್ತಿಯಿತ್ತು .

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ