ಕೋಚ್ ಆಗಿ ಮುಂದುವರಿಯಲು ಅನಿಲ್ ಕುಂಬ್ಳೆಗೆ ಗ್ರೀನ್ ಸಿಗ್ನಲ್

ಮಂಗಳವಾರ, 13 ಜೂನ್ 2017 (05:32 IST)
ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದವರೆಗೂ ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಯಲಿದ್ದಾ ಎಂದು ಬಿಸಿಸಿಐನ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ.


ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿ ಮುಗಿಯುವುದರೊಳಗೆ ಕುಂಬ್ಳೆಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ವರದಿಗಳಿಗೆ ಆ ಮೂಲಕ ಅವರು ತೆರೆ ಎಳೆದಿದ್ದಾರೆ.

ಜೂನ್ 23 ರಿಂದ ಜುಲೈ 3 ರವರೆಗೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಗೆ ಕಿರು ಪ್ರವಾಸ ಬೆಳೆಸಲಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯುತ್ತಿರುವುದರಿಂದ ತಂಡದ ಮೇಲೆ ಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಸ್ವಲ್ಪ ದಿನ ಮುಂದೂಡಲು ಬಿಸಿಸಿಐ ತೀರ್ಮಾನಿಸಿದೆ.

ಕೋಚ್ ಮತ್ತು ನಾಯಕನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ಕಾರಣಕ್ಕೆ ಹೊಸ ಕೋಚ್ ಹುಡುಕಾಟ ನಡೆಸಿಲ್ಲ. ಕುಂಬ್ಳೆ ಗುತ್ತಿಗೆ ಅವಧಿ ಮುಗಿದ ಹಿನ್ನಲೆಯಲ್ಲಿ ಹೊಸ ಕೋಚ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆಯಷ್ಟೇ. ಇದೀಗ ಹೊಸ ಕೋಚ್ ಆಯ್ಕೆ ಸಂದರ್ಭದಲ್ಲೂ ಮೊದಲ ಆಯ್ಕೆ ಕುಂಬ್ಳೆಗಿರುತ್ತದೆ ಎಂದು ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ