ವಿರಾಟ್ ಕೊಹ್ಲಿ, ತಮನ್ನಾ ಬಂಧಿಸಲು ಮದ್ರಾಸ್ ಕೋರ್ಟ್ ಗೆ ಅರ್ಜಿ

ಭಾನುವಾರ, 2 ಆಗಸ್ಟ್ 2020 (09:33 IST)
ಚೆನ್ನೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ತಮನ್ನಾ ಭಾಟಿಯಾರನ್ನು ಬಂಧಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.


ಕೊಹ್ಲಿ ಮತ್ತು ತಮನ್ನಾ ಆನ್ ಲೈನ್ ಜೂಜು ಪ್ರಚುರಪಡಿಸುವ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಅರ್ಜಿದಾರರು ಈ ದೂರು ನೀಡಿದ್ದಾರೆ. ಇದು ಇಬ್ಬರೂ ಸ್ಟಾರ್ ಗಳಿಗೆ ಸಂಕಷ್ಟ ತಂದೊಡ್ಡುವ ಸಾಧ‍್ಯತೆಯಿದೆ. ಜೂಜು ಭಾರತದಲ್ಲಿ ಅಪರಾಧವಾಗಿದೆ. ಆದರೆ ಕೊಹ್ಲಿ ಮತ್ತು ತಮನ್ನಾ ಪ್ರಚುರಪಡಿಸುವ ಈ ಆನ್ ಲೈನ್ ಗೇಮ್ ನ ಜಾಹೀರಾತು ಯುವಕರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಅರ್ಜಿದಾರರು ಆಪಾದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ