ಆಕ್ರಮಣಕಾರಿ ಕೊಹ್ಲಿ ಪಂದ್ಯ ಗೆಲುವಿನ ಆಟಕ್ಕೆ ಕಿಡಿಹೊತ್ತಿಸಿದರು: ಸಿಮ್ಮನ್ಸ್

ಶುಕ್ರವಾರ, 10 ಜೂನ್ 2016 (14:49 IST)
ಅತ್ಯಂತ ಆಕ್ರಮಣಕಾರಿ ಮನೋಭಾವದ ವಿರಾಟ್ ಕೊಹ್ಲಿ ವಿಶ್ವ ಟ್ವೆಂಟಿ 20 ಸೆಮಿಫೈನಲ್ ಪಂದ್ಯ ಗೆಲುವಿನ ಆಟವಾಡಲು  ಕಿಡಿ ಹೊತ್ತಿಸಿದರೆಂದು ಲೆಂಡ್ಸ್ ಸಿಮ್ಮನ್ಸ್ ಬಹಿರಂಗಮಾಡಿದ್ದಾರೆ. ಕೊಹ್ಲಿಯ 47 ಎಸೆತಗಳ 89 ರನ್‌ಗಳಿಂದ ಪ್ರೇರೇಪಿತರಾದ ಸಿಮ್ಮನ್ಸ್ 51 ಎಸೆತಗಳಲ್ಲಿ 82 ರನ್ ಬಾರಿಸಿ ವೆಸ್ಟ್ ಇಂಡೀಸ್ ತಂಡಕ್ಕೆ 7 ವಿಕೆಟ್ ಜಯ ತಂದಿತ್ತರು. ವೆಸ್ಟ್ ಇಂಡೀಸ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವ ಟಿ 20 ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದಿತು. ಮೈದಾನದಲ್ಲಿ ಕೊಹ್ಲಿ ಅವರ ಆಕ್ರಮಣಕಾರಿ ನಡವಳಿಕೆಯಿಂದ ತಾವು ಉತ್ತೇಜಿತರಾಗಿದ್ದಾಗಿ ಸಿಮ್ಮನ್ಸ್ ಹೇಳಿದರು.
 
ಕೊಹ್ಲಿ ಫೀಲ್ಡಿಂಗ್ ಮಾಡುವಾಗ ನನಗೆ ಏನೋ ಹೇಳಿದಾಗ,  ನೀನು ಮಾತ್ರ ಶ್ರೇಷ್ಟ ಬ್ಯಾಟ್ಸ್‌ಮನ್ ಅಲ್ಲವೆಂದು ನಾನು ತೋರಿಸುತ್ತೇನೆ ಎಂದು ಮನಸ್ಸಿನಲ್ಲೇ ಎಂದುಕೊಂಡಿದ್ದಾಗಿ ಸಿಮ್ಮನ್ಸ್ ಹೇಳಿದರು. ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಮತ್ತು ಬ್ಯಾಟಿಂಗ್‌ನಲ್ಲಿ ಕೂಡ ತುಂಬಾ ಆಕ್ರಮಣಕಾರಿಯಾಗಿರುತ್ತಾರೆ ಎಂದು ಸಿಮ್ಮನ್ಸ್ ಅಭಿಪ್ರಾಯಪಟ್ಟರು.

 
ಸೆಮಿಫೈನಲ್ ಪಂದ್ಯದಲ್ಲಿ ಸಿಮ್ಮನ್ಸ್ ಅದೃಷ್ಟ ಕೂಡ ಚೆನ್ನಾಗಿದ್ದು, ಎರಡು ಬಾರಿ ಕ್ಯಾಚ್ ಹಿಡಿದಿದ್ದರೂ ನೋಬಾಲ್‌ನಿಂದ ಪಾರಾಗಿದ್ದರು. 
 
 ಇಂತಹ ವಿಷಯಗಳು ನಮ್ಮ ಆಟಗಾರರನ್ನು ಪ್ರೇರೇಪಿಸುತ್ತದೆ. ಕೊಹ್ಲಿ ವರ್ತನೆ ನನ್ನನ್ನು ಖಂಡಿತವಾಗಿ ಪ್ರೇರೇಪಿಸಿತು. ಕೊಹ್ಲಿ ಒಬ್ಬರೇ ಅಲ್ಲ,  ನಾನು ಕೂಡ ಆ ರೀತಿ ಆಡುತ್ತೇನೆಂದು ತೋರಿಸಬೇಕೆಂದು ನಿಶ್ಚಯಿಸಿದೆ ಎಂದು ಸಿಮ್ಮನ್ಸ್ ಹೇಳಿದರು. 
 ಭಾರತದ ವಿರುದ್ಧ ಆ ಅಬ್ಬರದ ಆಟವು ತಮ್ಮ ವೃತ್ತಿಜೀವನದ ಮುಖ್ಯಾಂಶವಾಗಿದೆ. ನೋ ಬಾಲ್‌ಗಳ ಪೂರ್ಣ ಅವಕಾಶ ತೆಗೆದುಕೊಂಡು ಕೊನೆಯವರೆಗೆ ಬ್ಯಾಟಿಂಗ್ ಆಡಿದೆ ಎಂದು ಸಿಮ್ಮನ್ಸ್ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ