ಧೋನಿ, ದ್ರಾವಿಡ್ ವಿರುದ್ಧ ಎಂದೋ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಆಶೀಶ್ ನೆಹ್ರಾ

ಸೋಮವಾರ, 6 ಏಪ್ರಿಲ್ 2020 (09:39 IST)
ನವದೆಹಲಿ: ಧೋನಿ ಮತ್ತು ರಾಹುಲ್ ದ್ರಾವಿಡ್ ವಿರುದ್ಧ ತುಂಬಾ ವರ್ಷಗಳ ಹಿಂದೆ ಮೈದಾನದಲ್ಲಿ ನಿಂದಿಸಿದ್ದಕ್ಕೆ ಮಾಜಿ ವೇಗಿ ಆಶೀಶ್ ನೆಹ್ರಾ ಸಂದರ್ಶನವೊಂದರಲ್ಲಿ ಕ್ಷಮೆ ಯಾಚಿಸಿದ್ದಾರೆ.


2005 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೊಂದರಲ್ಲಿ ತಮ್ಮ ಬೌಲಿಂಗ್ ನಲ್ಲಿ ಶಾಹಿದ್ ಆಫ್ರಿದಿ ಬ್ಯಾಟ್ ನ ಅಂಚಿಗೆ ತಗುಲಿದ ಬಾಲ್ ಕೀಪರ್ ಕಡೆಗೆ ಸಾಗಿತ್ತು. ಆಗ ಕೀಪರ್ ಆಗಿ ಧೋನಿ ಮತ್ತು ಅವರ ಪಕ್ಕದಲ್ಲೇ ಮೊದಲ ಸ್ಲಿಪ್ ನಲ್ಲಿ ರಾಹುಲ್ ದ್ರಾವಿಡ್ ಇದ್ದರು.

ಇಬ್ಬರೂ ಕ್ರಿಕೆಟ್ ನ ಜೆಂಟಲ್ ಮೆನ್ ಗಳೆಂದು ಗುರುತಿಸಿಕೊಂಡವರು. ಆದರೆ ಅವರ ಹೆಗ್ಗಳಿಕೆಯನ್ನೂ ಮರೆತು ಆ ಕ್ಯಾಚ್ ಬಿಟ್ಟರೆಂಬ ಆಕ್ರೋಶದಲ್ಲಿ ಮನಸಾರೆ ನಿಂದಿಸಿದ್ದೆ. ಪಂದ್ಯದ ಬಳಿಕ ಅವರಿಬ್ಬರೂ ಏನೂ ನಡೆದೇ ಇಲ್ಲವೆಂಬಂತೆ ನನ್ನ ಜತೆ ಸಹಜವಾಗಿಯೇ ಇದ್ದರು. ಆದರೆ ನನಗೆ ಈಗಲೂ ಆವತ್ತು ಹಾಗೆ ನಡೆದುಕೊಂಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿದೆ ಎಂದು ನೆಹ್ರಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ