ಆಸ್ಟ್ರೇಲಿಯಾ ಪತ್ರಕರ್ತನಿಂದ ವಿರಾಟ್ ಕೊಹ್ಲಿಗೆ ಅವಮಾನ

ಬುಧವಾರ, 13 ಸೆಪ್ಟಂಬರ್ 2017 (11:05 IST)
ನವದೆಹಲಿ: ಕಳೆದ ಬಾರಿ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಿದಾಗ ಆಸ್ಟ್ರೇಲಿಯಾ ಪತ್ರಿಕೆಗಳು ವಿರಾಟ್ ಕೊಹ್ಲಿಯನ್ನು ಕೆಣಕಿದ್ದವು. ಇದೀಗ ಮತ್ತೆ ಕೊಹ್ಲಿಗೆ ಆಸೀಸ್ ಪತ್ರಕರ್ತರೊಬ್ಬರು ಅವಮಾನ ಮಾಡಿದ್ದಾರೆ.

 
ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಇಲೆವೆನ್ ತಂಡದೊಂದಿಗಿನಿ ಟಿ20 ಸರಣಿಯ ಬಗ್ಗೆ ಮಾತನಾಡುತ್ತಾ ಆಸೀಸ್ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿ ಗದಾಫಿ ಮೈದಾನದಲ್ಲಿ ಕಸ ಗುಡಿಸುತ್ತಿರುವ ಫೋಟೋ ಪ್ರಕಟಿಸಿ ‘ಸ್ವೀಪರ್’ ಎಂದು ಕರೆದಿದ್ದಾರೆ.

ವಿಶ್ವ ಇಲೆವೆನ್ ಪಂದ್ಯಕ್ಕೆ ‘ಸ್ವೀಪರ್’ ಕಸ ಗುಡಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೊಹ್ಲಿಯ ಸಂಬಳದಷ್ಟೂ ನಿಮ್ಮ ದೇಶದ ಜಿಡಿಪಿ ಇರಲ್ಲ ಎಂದು ಕೆಲವರು ಏಟು ಕೊಟ್ಟರೆ, ಇನ್ನು ಕೆಲವರು ಕೊಹ್ಲಿ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ.. ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ