ಕಾರು ಅಪಘಾತದಲ್ಲಿ ಸುರೇಶ್ ರೈನಾ ಜಸ್ಟ್ ಮಿಸ್

ಬುಧವಾರ, 13 ಸೆಪ್ಟಂಬರ್ 2017 (09:05 IST)
ಕಾನ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ  ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ರಕ್ಷಿಸಿಕೊಂಡಿದ್ದಾರೆ.

 
ಉತ್ತರ ಪ್ರದೇಶದ ಇಟವಾದಲ್ಲಿ ಘಟನೆ ನಡೆದಿದೆ. ಅಪಘಾತವಾಗುವಾಗ ಸ್ವತಃ ರೈನಾ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ದೆಹಲಿಯಿಂದ ಕಾನ್ಪುರಕ್ಕೆ ತಮ್ಮ ರೇಂಜ್ ರೋವರ್ ಕಾರ್ ನಲ್ಲಿ ರೈನಾ ಪ್ರಯಾಣ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಕಾರಿನ ಚಕ್ರವೊಂದು ಸ್ಪೋಟಗೊಂಡು ಅಪಘಾತಕ್ಕೀಡಾಯಿತು. ಆದರೆ ಕಾರು ವೇಗವಾಗಿ ಚಲಾಯಿಸುತ್ತಿರದ ಕಾರಣ ಅಪಾಯ ಸಂಭವಿಸಿಲ್ಲ. ನಂತರ ರೈನಾ ಇನ್ನೊಂದು ಕಾರಿನ ಮೂಲಕ ತಮ್ಮ ಪ್ರಯಾಣ ಮುಂದುವರಿಸಿದರು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ.. ಧೋನಿ, ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಪಾಕ್ ಅಭಿಮಾನಿಗಳು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ