4 ಎಸೆತಗಳಲ್ಲಿ 92 ರನ್ ನೀಡಿದ ಬೌಲರ್ ಗೆ ಸಿಕ್ಕಿದ ಶಿಕ್ಷೆ ಏನು ಗೊತ್ತಾ?

ಬುಧವಾರ, 3 ಮೇ 2017 (09:31 IST)
ಢಾಕಾ: ಕೆಲವು ದಿನಗಳ ಹಿಂದೆ ನಾಲ್ಕು ಎಸೆತಗಳಿಂದ 92 ರನ್ ನೀಡಿ ಸುದ್ದಿ ಮಾಡಿದ್ದ ಬಾಂಗ್ಲಾದೇಶದ ಕ್ಲಬ್ ಬೌಲರ್ ಸುಜೋನ್ ಮುಹಮದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

 
ಅವರ ಈ ‘ಮಹಾನ್’ ಸಾಧನೆಗೆ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ತಕ್ಕ ಶಿಕ್ಷೆ ನೀಡಿದೆ. ಆವತ್ತು ಅಂಪಾಯರ್ ಕಳಪೆ ಅಂಪಾಯರಿಂಗ್ ಮಾಡಿದ್ದಾರೆಂದು ಪ್ರತಿಭಟಿಸಲು ಸುಜೋನ್ ಈ ರೀತಿಯ ದಾಖಲೆ ಮಾಡಿದ್ದರು.

ಆದರೆ ಅವರ ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕ್ರಿಕೆಟ್ ಸಂಸ್ಥೆ 10 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಅದೂ ಸಾಲದ್ದಕ್ಕೆ ಅವರ ಕ್ಲಬ್, ನಾಯಕ, ಕೋಚ್ ಗೂ ಐದು ವರ್ಷದ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಸುಜೋನ್ ಅಂದು ನಾಲ್ಕು ಲೀಗಲ್ ಎಸೆತ ಹಾಕಿದ್ದರು. ಉಳಿದಂತೆ 13 ವೈಡ್ ಮತ್ತು ಮೂರು ನೋ ಬಾಲ್ ಎಸೆತಗಳನ್ನು ಎಸೆದಿದ್ದರು. ವೈಡ್ ಎಸೆತಗಳೆಲ್ಲವೂ ಬೌಂಡರಿ ಗೆರೆ ದಾಟಿತ್ತು. ಇದೀಗ ಆಟಗಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ