ಯೂಸುಫ್ ಪಠಾಣ್ ವಿದೇಶೀ ಲೀಗ್ ನಲ್ಲಿ ಆಡುವ ಕನಸಿಗೆ ತಣ್ಣೀರೆರಚಿದ ಬಿಸಿಸಿಐ

ಬುಧವಾರ, 15 ಫೆಬ್ರವರಿ 2017 (12:17 IST)
ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಟೀಂ ಇಂಡಿಯಾ ಕ್ರಿಕೆಟಿಗ ಯೂಸುಫ್ ಪಠಾಣ್ ಹಾಂಗ್ ಕಾಂಗ್ ಲೀಗ್ ನಲ್ಲಿ ಆಡುವ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಆದರೆ ಬಿಸಿಸಿಐ ಇದಕ್ಕೆ ತಣ್ಣೀರೆರಚಿದೆ.

 
ಕ್ರಿಕೆಟಿಗ ವಿದೇಶೀ ಲೀಗ್ ನಲ್ಲಿ ಭಾಗವಹಿಸುವುದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯ ನಿರಪೇಕ್ಷಣಾ ಪತ್ರ ಬೇಕಿತ್ತು. ಆದರೆ ಅದನ್ನು ಕೊಡುವುದಕ್ಕೆ ಬಿಸಿಸಿಐ ನಿರಾಕರಿಸಿದೆ. ಇದರೊಂದಿಗೆ ವಿದೇಶಿ ಲೀಗ್ ನಲ್ಲಿ ಆಡುವ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಗೌರವದಿಂದ ಯೂಸುಫ್ ವಂಚಿತರಾಗಲಿದ್ದಾರೆ.

ಈ ಮೊದಲು ಬಿಸಿಸಿಐ ಪಠಾಣ್ ವಿದೇಶಿ ಲೀಗ್ ನಲ್ಲಿ ಭಾಗವಹಿಸುವುದಕ್ಕೆ ಹಸಿರು ನಿಶಾನೆ ತೋರಿತ್ತು. ಆದರೆ ನಿರಪೇಕ್ಷಣಾ ಪತ್ರ ನೀಡುವ ಸಂದರ್ಭದಲ್ಲಿ ಉಲ್ಟಾ ಹೊಡೆದಿದೆ.  ಭಾರತೀಯ ಆಟಗಾರನೆಂದರೆ ಅವರಿಗೆ ಖ್ಯಾತಿಯಿರುತ್ತದೆ. ಭಾರತದ ಆಟಗಾರ ವಿದೇಶಿ ಲೀಗ್ ನಲ್ಲಿ ಆಡುತ್ತಾರೆಂದರೆ ನಮ್ಮ ಹೂಡಿಕೆದಾರರು ವಿದೇಶಿ ಲೀಗ್ ನತ್ತ ವಾಲಬಹುದು. ಇದರಿಂದ ನಮಗೆ ನಷ್ಟವಾಗಬಹುದು. ಅದಕ್ಕೇ ಯೂಸಫ್ ಗೆ ಅನುಮತಿ ನೀಡುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ