ಕೋಲ್ಕೊತ್ತಾ: ಕರುಣ್ ನಾಯರ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿ ಸೈ ಎನಿಸಿಕೊಂಡಿದ್ದರು. ಆದರೆ ಬೆಂಗಾಳದ ಈ ರಣಜಿ ಆಟಗಾರ ಕ್ಲಬ್ ಲೆವೆಲ್ ಕ್ರಿಕೆಟ್ ನಲ್ಲಿ ಚತುರ್ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಬೆಂಗಾಳದ ಪಂಕಜ್ ಶಾ ಈ ಕೀರ್ತಿ ಪತಾಕೆ ಹಾರಿಸಿದ ಕ್ರಿಕೆಟಿಗ. ಇವರು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಳ್ ನ ಡಿವಿಷನಲ್ ಕ್ಲಬ್ ಪಂದ್ಯದಲ್ಲಿ ಬರೋಬ್ಬರಿ 413 ರನ್ ಬಾರಿಸಿದ್ದಾರೆ. ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ ಅವರು 44 ಬೌಂಡರಿ ಮತ್ತು 23 ಸಿಕ್ಸರ್ ಸಿಡಿಸಿದ್ದಾರೆ.
ತಾವು ಪ್ರತಿನಿಧಿಸುವ ಬಾರಿಶಾ ಸ್ಪೋರ್ಟ್ ಕ್ಲಬ್ ನ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ 28 ವರ್ಷದ ಪಂಕಜ್ ತಮ್ಮ ತಂಡದ ಸ್ಕೋರ್ ನ್ನು 708 ರನ್ ಗಳಿಗೆ ತಲುಪಿಸಿದ್ದಾರೆ. ಆದರೆ ಕ್ಲಬ್ ಕ್ರಿಕೆಟ್ ನಲ್ಲಿ ಪಂಕಜ್ ಗಿಂತ ಮೊದಲು ಮೂವರು ಈ ಸಾಧನೆ ಮಾಡಿದ್ದರು.
ಆದರೂ ಇತ್ತೀಚೆಗೆ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಪಂಕಜ್ ಇಲ್ಲಿ ಮಾತ್ರ ರನ್ ಮಳೆಯನ್ನೇ ಹರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ