ಬಿಲ್ಲಿ ಬೌಡೆನ್ ಅಂತಾರಾಷ್ಟ್ರೀಯ ಅಂಪೈರಿಂಗ್ ಸಮಿತಿಯಿಂದ ಡ್ರಾಪ್

ಗುರುವಾರ, 16 ಜೂನ್ 2016 (17:50 IST)
ವಿಭಿನ್ನ ರೀತಿಯಲ್ಲಿ ಅಂಪೈರಿಂಗ್ ಮಾಡುವ ಮೂಲಕ ಗಮನಸೆಳೆದಿದ್ದ ನ್ಯೂಜಿಲೆಂಡ್ ಅಂಪೈರ್ ಬಿಲ್ಲಿ ಬೌಡೆನ್ ಅವರನ್ನು ನ್ಯೂಜಿಲೆಂಡ್ ಕ್ರಿಕೆಟ್ ಅಂತಾರಾಷ್ಟ್ರೀಯ ಸಮಿತಿಯಿಂದ ಡ್ರಾಪ್ ಮಾಡಲಾಗಿದ್ದು, ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುವುದಿಲ್ಲ. 
 
84 ಟೆಸ್ಟ್‌ ಪಂದ್ಯಗಳಲ್ಲಿ ಮತ್ತು 200 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 21 ವರ್ಷಗಳ ಕಾಲ ಅಂಪೈರಿಂಗ್ ಮಾಡಿದ್ದ ಬೌಡೆನ್ ತಮ್ಮ ವಿಚಿತ್ರ ರೀತಿಯ ಅಂಪೈರಿಂಗ್ ಸಂಕೇತಗಳ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದರು. ಅವರು ಔಟ್ ಮಾಡುವಾಗ ಬೆರಳನ್ನು ನೇರವಾಗಿ ತೋರಿಸದೇ ವಕ್ರವಾಗಿ ತೋರಿಸುತ್ತಿದ್ದರು. ಆದರೆ ಅದಕ್ಕೆ ಕಾರಣವೇನೆಂದರೆ ಆರ್ಥ್ರೈಟಿಸ್‌ ಕಾಯಿಲೆಗೆ ಒಳಗಾಗಿದ್ದರಿಂದ ಬೆರಳವನ್ನು ನೇರವಾಗಿ ತೋರಿಸಲು ಆಗುತ್ತಿಲ್ಲವೆಂದು ಬೌಡೆನ್ ಹೇಳಿದ್ದರು.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಮಿತಿಯಿಂದ 2013ರಲ್ಲಿ ಡ್ರಾಪ್ ಮಾಡಿ 2014ರಲ್ಲಿ ಪುನಃ ಸೇರಿಸಿಕೊಳ್ಳಲಾಗಿತ್ತು. 2015ರಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಪಂದ್ಯದಲ್ಲಿ ಅಂಪೈರಿಂಗ್ ಮಾಡುವಾಗ ಪುನಃ ಡ್ರಾಪ್ ಮಾಡಲಾಗಿತ್ತು. ಬೌಡೆನ್  ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆಡುವಾಗ 200ನೇ ಏಕದಿನ ಪಂದ್ಯಕ್ಕೆ ಅಂಪೈರಿಂಗ್ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ