ಸನ್ ರೈಸರ್ಸ್ ಬಿಪುಲ್ ಶರ್ಮಾ ಬ್ಯಾಟಿಂಗ್‌ಗೆ ಮಾಜಿ ಕ್ರಿಕೆಟಿಗರ ಮೆಚ್ಚುಗೆ
ಶನಿವಾರ, 28 ಮೇ 2016 (14:21 IST)
ಡೇವಿಡ್ ವಾರ್ನರ್ ಬಿಪುಲ್ ಶರ್ಮಾ ಅವರ ಅಚ್ಚರಿಯ ಜತೆಯಾಟದ ನೆರವಿನೊಂದಿಗೆ ಗುಜರಾತ್ ಲಯನ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದರು. ಶರ್ಮಾ ಒತ್ತಡದಲ್ಲಿ 27 ಅಜೇಯ ರನ್ ಸಿಡಿಸಿದರು.
ಪ್ರವೀಣ್ ಕುಮಾರ್ ಮತ್ತು ಧವಲ್ ಕುಲಕರ್ಣಿ ಬೌಲಿಂಗ್‌ನಲ್ಲಿ ಅವರ ಸಿಕ್ಸರ್‌ಗಳು ಸನ್‌ರೈಸರ್ಸ್ ಪರವಾಗಿ ಪಂದ್ಯ ತಿರುವು ಪಡೆದುಕೊಳ್ಳಲು ನಿರ್ಣಾಯಕ ಪಾತ್ರ ವಹಿಸಿತು. ಬಿಪುಲ್ ಆಟದ ವೈಖರಿಗೆ ಮಾಜಿ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಬಿಪುಲ್ 2007ರಲ್ಲಿ ಐಪಿಎಲ್ ಭಾಗವಾಗಿದ್ದು, 2010ರಲ್ಲಿ ಕಿಂಗ್ಸ್ ಇಲೆವನ್ ಅವರನ್ನು ಖರೀದಿಸಿತ್ತು.
2015ರಲ್ಲಿ ಬಿಪುಲ್ ಅವರನ್ನು ಲಕ್ಷ್ಮಿ ಶುಕ್ಲಾ ಬದಲಿಗೆ ಆಯ್ಕೆ ಮಾಡಲಾಯಿತು. ಕಳೆದ ಸೀಸನ್‌ನಲ್ಲಿ ಅವರು ಎಸ್ಆರ್‌ಎಚ್ ಪರ 4 ಪಂದ್ಯಗಳಲ್ಲಿ ಆಡಿ ನಾಲ್ಕು ವಿಕೆಟ್ ಕಬಳಿಸಿ ಒಂದು ರನ್ ಸ್ಕೋರ್ ಮಾಡಿದ್ದರು.
ಬಿಪುಲ್ ಪಂಜಾಬ್ ರಣಜಿ ಟ್ರೋಫಿಯಲ್ಲಿನ ತಮ್ಮ 14 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಂದು ಶತಕವನ್ನೂ ಸಿಡಿಸಿಲ್ಲ. ಆದರೆ ಅವರು 2013ರಲ್ಲಿ ಹಿಮಾಚಲ ಪ್ರದೇಶಕ್ಕೆ ಸ್ಥಳಾಂತರಗೊಂಡ ಮೇಲೆ ಹೊಸ ತಂಡದೊಂದಿಗೆ ಯಶಸ್ಸನ್ನು ಪಡೆದರು.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.