ಐಪಿಎಲ್ ಟೂರ್ನಿಯ ಸಂದರ್ಭದಲ್ಲೂ ಟೈಮ್ಸ್ ಪತ್ರಕರ್ತೆಯನ್ನು ಕೆಲವು ಅನುಚಿತ ಪ್ರಶ್ನೆಗಳನ್ನು ಕೇಳಿ ಕ್ರಿಸ್ ಗೇಲ್ ಮುಜುಗರಕ್ಕೆ ಈಡುಮಾಡಿದ್ದರು. ಆದಾಗ್ಯೂ ಸಾಮಿ ಇತ್ತೀಚಿನ ವಿವಾದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ. ಕ್ರಿಸ್ ಗೇಲ್ ಯೂನಿವರ್ಸ್ ಬಾಸ್, ನನ್ನ ಟೀಂ ಮೇಟ್ ಆಗಿದ್ದು ನಾನು ಗೌರವಿಸುತ್ತೇನೆ. ಕ್ರಿಸ್ ಗೇಲ್ ಅವರನ್ನು ಯಾವುದೇ ಕಾರಣವಿಲ್ಲದೇ ಜನರು ಗುರಿಮಾಡುತ್ತಿದ್ದಾರೆ. ನನಗೆ ಕ್ರಿಸ್ ಕ್ರಿಕೆಟಿಂಗ್ ಹೀರೊಗಳಲ್ಲಿ ಒಬ್ಬರು. ಅವರು ಎಂಟರ್ ಟೇನರ್ ಆಗಿದ್ದು, ಕ್ರಿಕೆಟ್ ಫೀಲ್ಡ್‌ನಲ್ಲಿ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ನಾನು ಸದಾ ಅವರ ಬಗ್ಗೆ ಅಭಿಮಾನ ಹೊಂದಿದ್ದೇನೆ ಎಂದು ಸಾಮಿ ಹೇಳಿದರು.