ಕೊಹ್ಲಿ, ಡಿ ವಿಲಿಯರ್ಸ್ ಬ್ಯಾಟ್‌ಮ್ಯಾನ್ ಮತ್ತು ಸೂಪರ್‌ಮ್ಯಾನ್: ಕ್ರಿಸ್ ಗೇಲ್ ಬಣ್ಣನೆ

ಮಂಗಳವಾರ, 17 ಮೇ 2016 (19:11 IST)
ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನು ಕ್ರಿಕೆಟ್‌ನ ಬ್ಯಾಟ್‌ಮನ್ ಮತ್ತು ಸೂಪರ್‌ಮ್ಯಾನ್ ಎಂದು ಬಣ್ಣಿಸಿದ್ದಾರೆ. ಕಠಿಣ ಹೋರಾಟದ ಪಂದ್ಯಗಳಲ್ಲಿ ಇವರಿಬ್ಬರ ಭರ್ಜರಿ ಜತೆಯಾಟದ ಬಳಿಕ ಕ್ರಿಸ್ ಗೇಲ್ ಇಬ್ಬರ ಆಟವನ್ನೂ ಶ್ಲಾಘಿಸಿದರು. 
 
ಎದುರಾಳಿ ತಂಡದ ಮೇಲೆ ಇಬ್ಬರ ಪರಿಣಾಮ ಒಂದೇ ರೀತಿಯಿದ್ದು, ದೈತ್ಯ ಸ್ವರೂಪಿ ಆಟಗಾರರು ಮತ್ತು ಅವರಿಬ್ಬರೂ ಒಟ್ಟಿಗೆ ಕ್ಲಿಕ್ ಆದರೆ ಎದುರಾಳಿ ತಂಡಕ್ಕೆ ವಿನಾಶಕಾರಿ ಮತ್ತು ಸಿಂಹಸ್ವಪ್ನರು ಎಂದು ಕ್ರಿಸ್ ಗೇಲ್ ವಿಶ್ಲೇಷಿಸಿದರು.
 
ಕೊಹ್ಲಿ ಮತ್ತು ಡಿ ವಿಲಿಯರ್ಸ್ ಈ ಸೀಸನ್ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ನಂಬರ್ ಒಂದು ಮತ್ತು ನಂಬರ್ 2 ರ ಸ್ಥಾನದಲ್ಲಿದ್ದು, 12 ಪಂದ್ಯಗಳಲ್ಲಿ 1349 ರನ್ ಸಿಡಿಸಿದ್ದಾರೆ. ಕೊಹ್ಲಿ ಕಿತ್ತಲೆ ಕ್ಯಾಪ್ ಧರಿಸಿದರೆ, ಡಿ ವಿಲಿಯರ್ಸ್ 159 ರನ್‌ಗಳಿಂದ ಹಿಂದುಳಿದರೂ ಅವರ ಸ್ಟ್ರೈಕ್ ರೇಟ್ ಹೆಚ್ಚಿಗೆಯಿದ್ದು, ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ