ಮಾಜಿ ಕ್ರಿಕೆಟಿಗರಿಗೆ ಕೋಚ್ ರವಿಶಾಸ್ತ್ರಿ ಅವಮಾನ?

ಮಂಗಳವಾರ, 19 ಡಿಸೆಂಬರ್ 2017 (08:53 IST)
ಮುಂಬೈ: ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
 

ಸಂದರ್ಶನದಲ್ಲಿ ಶಾಸ್ತ್ರಿ ‘ನಾವು ಟೈಮ್ ಪಾಸ್ ಗಾಗಿ ಆಡುತ್ತಿಲ್ಲ. ನಮ್ಮ ಈಗಿನ ತಂಡದಲ್ಲಿ ಲೆಕ್ಕ ಭರ್ತಿಗೆ ಆಡುವ ಆಟಗಾರರಿಲ್ಲ’ ಎಂದು ರವಿಶಾಸ್ತ್ರಿ ಹೇಳಿರುವುದು ಸಂಶಯಗಳಿಗೆ ಕಾರಣವಾಗಿದೆ.

ಈ ಹೇಳಿಕೆಗೆ ಇದೀಗ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಹಾಗಿದ್ದರೆ ಇದುವರೆಗೆ ಸಚಿನ್, ದ್ರಾವಿಡ್, ಗಂಗೂಲಿಯಂತಹ ಮಹಾನ್ ಆಟಗಾರರಿದ್ದ ತಂಡ ವ್ಯರ್ಥ ತಂಡವಾಗಿತ್ತೇ ಎಂದು ಕೆಲವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ತಮ್ಮ ಕಾಂಬಿನೇಷನ್ ನ ಟೀಂ ಇಂಡಿಯಾವನ್ನು ಹೊಗಳುವ ಭರದಲ್ಲಿ ರವಿಶಾಸ್ತ್ರಿ ಈ ರೀತಿ ಟಾಂಗ್ ಕೊಟ್ಟಿದ್ದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ