ವಿರಾಟ್-ಅನುಷ್ಕಾ ಮದುವೆಗೆ ಎದುರಾಗಿದ್ದ ಆ ಆತಂಕದ ಕ್ಷಣ!

ಸೋಮವಾರ, 18 ಡಿಸೆಂಬರ್ 2017 (09:26 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದೇನೋ ನಿಜ. ಆದರೆ ಮದುವೆಗೂ ಮೊದಲು ಹಲವು ಆತಂಕದ ಕ್ಷಣಗಳು ಎದುರಾಗಿತ್ತು ಎಂದು ಮದುವೆಯ ತಯಾರಿ ಉಸ್ತುವಾರಿ ವಹಿಸಿಕೊಂಡಿದ್ದ ಡಿಸೈನರ್ ದೇವಿಕಾ ನರೈನ್ ಆಂಗ್ಲ ಮಾಧ್ಯಮಕ್ಕೆ ಹೇಳಿದ್ದಾರೆ.
 

ವಿರಾಟ್ ಮತ್ತು ಅನುಷ್ಕಾ ಮದುವೆಯನ್ನು ಹೊರಾವರಣದಲ್ಲಿ ಮಾಡಬೇಕೆಂದು ಯೋಜನೆ ಮಾಡಿಕೊಳ್ಳಲಾಗಿತ್ತಂತೆ. ಆದರೆ ಅದು ಯಾವುದೂ ನಡೆಯಲಿಲ್ಲ. ಈ ಸಮಯದಲ್ಲಿ ಇಟೆಲಿಯಲ್ಲಿ ವಿಪರೀತ ಚಳಿ, ಸ್ನೋ ಫಾಲಿಂಗ್ ಇರುತ್ತದೆ. ಅದರ ನಡುವೆಯೂ ಇಲ್ಲಿ ವಿವಾಹ ಮಾಡಲು ಹೋಗಿ ನಾವು ಸಿಕ್ಕಿ ಹಾಕಿಕೊಂಡಿದ್ದೆವು ಎಂದು ದೇವಿಕಾ ಹೇಳಿಕೊಂಡಿದ್ದಾರೆ.

ಮೆಹಂದಿ ಕಾರ್ಯಕ್ರಮದ ದಿನ ಮದುವೆ ಚಪ್ಪರ ಹಾಕಿದ್ದ ಹೊರಾವರಣದಲ್ಲಿ ಸಂಪೂರ್ಣ ಇಬ್ಬನಿ ಬಿದ್ದು, ಹಿಮದಿಂದ ಆವೃತವಾಗಿತ್ತಂತೆ. ಮಧ್ಯಾಹ್ನವಾಗುತ್ತಿದ್ದಂತೆ ಇಬ್ಬನಿ ಕರಗಿ ಮಳೆಯಂತೆ ಚಪ್ಪರದಿಂದ ಹನಿ ಬೀಳುತ್ತಿತ್ತು. ಕೊನೆಗೆ ಕೆಲವೇ ಗಂಟೆಗಳು ಬಾಕಿಯಿರುವಂತೆ ಮದುವೆ ಮಂಟಪವನ್ನು ಒಳಾಂಗಣಕ್ಕೆ ಬದಲಾಯಿಸಲಾಯಿತು ಎಂದು ದೇವಿಕಾ ಆ ಕ್ಷಣಗಳನ್ನು ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ