ಗಾಯಗೊಂಡಿರುವ ಪೃಥ್ವಿ ಶಾ ಸ್ಥಿತಿ ಏನಾಗಿದೆ ಗೊತ್ತಾ? ರವಿಶಾಸ್ತ್ರಿ ಹೇಳಿದ್ದೇನು?
ಬಹುಶಃ ಅವರು ಮೂರನೇ ಟೆಸ್ಟ್ ಪಂದ್ಯದ ವೇಳೆ ಚೇತರಿಸಿಕೊಂಡು ತಂಡಕ್ಕೆ ಬರಬಹುದು ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ‘ಪೃಥ್ವಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ನಡೆದಾಡಲು ಶುರು ಮಾಡಿದ್ದಾರೆ. ಬಹುಶಃ ಈ ವಾರಂತ್ಯಕ್ಕೆ ಅವರು ಅಭ‍್ಯಾಸಕ್ಕೆ ಮರಳಬಹುದು. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಬೇಸರವಾಗುತ್ತದೆ. ಮೂರನೇ ಟೆಸ್ಟ್ ವೇಳೆಗೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.