ಬೆನ್ ಸ್ಟೋಕ್ಸ್ ಗಾದ ಗತಿ ಇನ್ನಷ್ಟು ಕ್ರಿಕೆಟಿಗರಿಗೆ ಆದರೂ ಅಚ್ಚರಿಯಿಲ್ಲ!
ಬಿಡುವಿಲ್ಲದ ಕ್ರಿಕೆಟ್ ನಿಂದಾಗಿ ಕ್ರಿಕೆಟಿಗರು ಹೆಚ್ಚು ಸಮಯ ಕಠಿಣ ಬಯೋ ಬಬಲ್ ವಾತಾವರಣದಲ್ಲೇ ಕಾಲ ಕಳೆಯುತ್ತಾರೆ. ಈ ವೇಳೆ ಅವರಿಗೆ ಹೊರಗೆ ಸುತ್ತಾಡುವಂತಿಲ್ಲ, ಯಾರನ್ನೂ ಭೇಟಿ ಮಾಡುವಂತಿಲ್ಲ. ಒಂದು ರೀತಿ ಕಟ್ಟಿ ಹಾಕಿದ ವಾತಾವರಣ. ಇದರಿಂದಾಗಿ ಕ್ರೀಡಾಳುಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಆತಂಕ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನಷ್ಟು ಕ್ರಿಕೆಟಿಗರು ಮಾನಸಿಕ ಆರೋಗ್ಯ ಕಾರಣ ನೀಡಿ ಕ್ರಿಕೆಟ್ ನಿಂದ ಬಿಡುವು ಪಡೆಯುವ ಸನ್ನಿವೇಶಗಳು ಸಾಮಾನ್ಯವಾಗಬಹುದು.