ಇಂದು ಬೆಳಿಗ್ಗೆ ತಮ್ಮ ಪುತ್ರನ ಜೊತೆ ಮಾತನಾಡಿದ್ದ ಭಜರಂಗ್ ತಂದೆ ಬಲ್ವಾನ್ ಸಿಂಗ್ ಕೆಲವು ಸಲಹೆ ಸೂಚನೆ ನೀಡಿದ್ದರಂತೆ. ಕಳೆದ ಮೂರು ಪಂದ್ಯಗಳಲ್ಲಿ ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಈ ಪಂದ್ಯದಲ್ಲಿ ನಿನ್ನ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸು. ಪದಕ ಗೆದ್ದು ಬಾ ಎಂದಿದ್ದರಂತೆ. ಹಾಗಂತ ಮಾಧ‍್ಯಮ ಸಂದರ್ಶನದಲ್ಲಿ ಬಲವಂತ್ ಹೇಳಿದ್ದರು.
ಅಷ್ಟೇ ಅಲ್ಲ, ತಮ್ಮ ಮಗ ಖಾಲಿ ಕೈಯಲ್ಲಿ ಬರಲ್ಲ ಎಂದು ವಿಶ್ವಾಸದಿಂದ ಹೇಳಿದ್ದರು. ತಂದೆಯ ವಿಶ್ವಾಸವನ್ನು ಭಜರಂಗ್ ಕೊನೆಗೂ ಉಳಿಸಿಕೊಂಡು ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ಮರಳುತ್ತಿದ್ದಾರೆ.